ಗಂಡನ ಕೆಲಸ ಪಡೆಯಲು ನಕಲಿ ಅಂಕಪಟ್ಟಿ ನೀಡಿದ ಪೊಲೀಸ್ ಅಧಿಕಾರಿ ಪತ್ನಿ ಅರೆಸ್ಟ್

ಸೋಮವಾರ, 14 ಮಾರ್ಚ್ 2022 (09:00 IST)
ಪುಣೆ: ತೀರಿ ಹೋದ ಗಂಡನ ಉದ್ಯೋಗ ಪಡೆಯಲು ನಕಲಿ ಅಂಕಪಟ್ಟಿ ನೀಡಿ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಬಂಧಿಸಲಾಗಿದೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯಲ್ಲಿದ್ದ ಪತಿ ಕೆಲವು ಸಮಯದ ಮೊದಲು ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಅನುಕಂಪದ ಆಧಾರದಲ್ಲಿ ಆತನ ಉದ್ಯೋಗ ಪಡೆಯಲು ಪತ್ನಿ ಬಿಎ ಪದವಿಯ ನಕಲಿ ಅಂಕಪಟ್ಟಿ ನೀಡಿ ವಂಚಿಸಲೆತ್ನಿಸಿದ್ದಳು.

ಈ ನಕಲಿ ದಾಖಲೆ ಪತ್ರಗಳನ್ನು ಪುಣೆಯ ಸಿಐಡಿ ಕಚೇರಿಗೆ ಸಲ್ಲಿಸಿದ್ದಳು. ಆದರೆ ಅಲ್ಲಿ ಇದು ನಕಲಿ ದಾಖಲೆ ಪತ್ರಗಳೆಂದು ತಿಳಿದುಬಂದಿದ್ದು, ಸಿಐಡಿ ಅಧಿಕಾರಿಗಳು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ