ನಿತಿನ್ ಗಡ್ಕರಿ ಪುತ್ರಿ ವಿವಾಹಕ್ಕೆ ಘಟಾನುಘಟಿಗಳ ಆಗಮನ

ಶನಿವಾರ, 3 ಡಿಸೆಂಬರ್ 2016 (16:56 IST)
ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರಿಯ ವಿವಾಹಕ್ಕೆ ಪ್ರಧಾನಿ ಮೋದಿ ಸೇರಿದಂತೆ, ಘಟಾನುಘಟಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಕಾಶ್ ಜಾವ್ಡೇಕರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಸೇರಿದಂತೆ ನೂರಾರು ಗಣ್ಯರು ಆಗಮಿಸುವ ನಿರೀಕ್ಷೆಯಿದೆ.
 
ಗಡ್ಕರಿಯವರ ಮೂವರು ಮಕ್ಕಳಲ್ಲಿ ಕಿರಿಯವಳಾದ ಪುತ್ರಿ ಕೇಟ್ಕಿ, ಅಮೆರಿಕದಲ್ಲಿರುವ ಫೇಸ್‌ಬುಕ್ ಕಚೇರಿಯ ಉದ್ಯೋಗಿಯಾಗಿರುವ ಆದಿತ್ಯ ಕಾಸ್ಕೇಡಿಕರ್ ಅವರೊಂದಿಗೆ ವಿವಾಹವಾಗಲಿದ್ದಾರೆ.
 
ಮೂಲಗಳ ಪ್ರಕಾರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ರಾತ್ರಿ ನಾಗ್ಪುರ್‌ಗೆ ಆಗಮಿಸಲಿದ್ದು, ವಿವಾಹದ ನಂತರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
 
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪ್ರಕಾಶ್ ಜಾವ್ಡೇಕರ್ ಹೊರತುಪಡಿಸಿ, ಕೇಂದ್ರದ ರಾಜ್ಯ ಸಚಿವರಾದ ಪಿಯೂಷ್ ಗೋಯಲ್ ಇತರ ಬಿಜೆಪಿ ನಾಯಕರು ವಿವಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
 
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಚತ್ತೀಸ್‌ಗಡ್‌ ಸಿಎಂ ರಮಣ್ ಸಿಂಗ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್, ಯೋಗ ಗುರು ಬಾಬಾ ರಾಮದೇವ್, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅತಿಥಿಗಳಾಗಿ ಆಗಮಿಸಲಿದ್ದಾರೆ.
 
ಚಳಿಗಾಲದ ಅಧಿವೇಶನ ಡಿಸೆಂಬರ್ 5 ರಿಂದ ಆರಂಭವಾಗಲಿರುವುದರಿಂದ ಬಹತೇಕ ಸಚಿವರು ಗಡ್ಕರಿ ಪುತ್ರಿಯ ವಿವಾಹಕ್ಕೆ ತೆರಳಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರ್ ಮೂಲದವರಾಗಿದ್ದು, ಅವರಿಗೆ ನಿಖಿಲ್ ಮತ್ತು ಸಾರಂಗ್ ಎನ್ನುವ ಇಬ್ಬರು ಪುತ್ರರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ