ನವದೆಹಲಿ : ಭಾರತದ ಹೆಮ್ಮೆಯ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುತ್ತಿರುವ ಚಂದ್ರಯಾನ-3 ಮಿಷನ್ನ ಪೋಟೋಗಳನ್ನು ಇಸ್ರೋ ನಿರಂತರವಾಗಿ ಹಂಚಿಕೊಳ್ಳುತ್ತಿದೆ.
ಬುಧವಾರ ಬೆಳಗ್ಗೆ ಚಂದ್ರಯಾನ ಮಿಷನ್ನ ಪ್ರಗ್ಯಾನ್ ರೋವರ್ ವಿಕ್ರಂ ಲ್ಯಾಂಡರ್ನ ಚಿತ್ರವನ್ನು ಕ್ಲಿಕ್ಕಿಸಿದೆ. ಈ ಚಿತ್ರವನ್ನು ಇಸ್ರೋ ತನ್ನ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಸ್ಮೈಲ್ ಪ್ಲೀಸ್! ಇಂದು ಬೆಳಗ್ಗೆ ರೋವರ್ ವಿಕ್ರಮ್ ಲ್ಯಾಂಡರ್ನ ಚಿತ್ರವನ್ನು ಕ್ಲಿಕ್ಕಿಸಿದೆ. ರೋವರ್ನಲ್ಲಿನ ನ್ಯಾವಿಗೇಷನ್ ಕ್ಯಾಮೆರಾದಿಂದ ಮಿಷನ್ನ ಚಿತ್ರವನ್ನು ತೆಗೆಯಲಾಗಿದೆ. ಚಂದ್ರಯಾನ-3 ಮಿಷನ್ಗಾಗಿ ನ್ಯಾವಿಗೇಷನ್ ಕ್ಯಾಮೆರಾಗಳನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ.