ಹೊಟ್ಟೆಯಲ್ಲಿರೋದು ನಿನ್ನದೇ ಮಗು ಎಂದಿದ್ದಕ್ಕೆ ಸಿಟ್ಟು! ಗರ್ಭಿಣಿಗೆ ಇರಿದ ಪ್ರಿಯಕರ
ಕೆಲವು ತಿಂಗಳುಗಳ ಮೊದಲು ಯುವತಿಗೆ ಅಬಾರ್ಷನ್ ಆಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಈಗಾಗಲೇ ಪ್ರಿಯಕರ 1.5 ಲಕ್ಷ ರೂ.ಗಳನ್ನು ಯುವತಿಗೆ ನೀಡಿದ್ದ. ಇದೀಗ ಮತ್ತೆ ಆಕೆ ಗರ್ಭಿಣಿಯಾಗಿದ್ದಳು.
ಈ ನಡುವೆ ಆರೋಪಿ ಯುವಕನಿಗೆ ಮನೆಯಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದನ್ನು ತಿಳಿದ ಪ್ರೇಯಸಿ ಮನೆಗೆ ಬಂದು ಗಲಾಟೆ ಮಾಡಿದ್ದಳು. ತನ್ನ ಹೊಟ್ಟೆಯಲ್ಲಿರುವುದು ನಿನ್ನದೇ ಮಗು ಎಂದು ಯುವತಿ ಆರೋಪಿಸಿದ್ದಳು. ಆದರೆ ಇದನ್ನು ನಿರಾಕರಿಸಿದ ಪ್ರಿಯಕರ ಸಿಟ್ಟಿನಿಂದ ಆಕೆಯ ಕುತ್ತಿಗೆ ಸೀಳಿದ್ದಾನೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.