ದಿಸ್ಪುರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಮೊದಲ ಬಾರಿಗೆ ಯುದ್ಧ ವಿಮಾನ ಸುಖೋಯ್ 30 ಎಂಕೆಐನಲ್ಲಿ ಹಾರಾಟ ನಡೆಸಿದ್ದಾರೆ.
ಶನಿವಾರ ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಮುರ್ಮು ಯುದ್ಧ ವಿಮಾನವನ್ನು ಏರಿದ್ದಾರೆ. ಈ ಮೂಲಕ ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ 2ನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಹಾರಾಟದ ಬಳಿಕ ರಾಷ್ಟ್ರಪತಿ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿದಿದ್ದಾರೆ.
ಸುಖೋಯ್-30 ಎಂಕೆಐ ಟ್ವಿನ್ ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ. ಮಾತ್ರವಲ್ಲದೇ ಇದನ್ನು ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಹೆಚ್ಎಎಲ್) ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ.