ಜೀವರಕ್ಷಕರಿಗೆ ಕಾನೂನಿನ ರಕ್ಷಣೆ ನೀಡುವ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ

ಸೋಮವಾರ, 1 ಅಕ್ಟೋಬರ್ 2018 (14:09 IST)
ನವದೆಹಲಿ : ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ದೊರೆಯುವಂತೆ ಮಾಡುವವರು ಇನ್ಮುಂದೆ ಪೊಲೀಸರು ಅಥವಾ ತನಿಖೆಗೆ ಹೆದರಬೇಕಾಗಿಲ್ಲ.


ಹೌದು. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವ ರಾಜ್ಯದ ಜೀವರಕ್ಷಕರಿಗೆ ಇನ್ಮುಂದೆ ಕಾನೂನಿನ ರಕ್ಷಣೆ ನೀಡುವ ಮತ್ತು ಅನಗತ್ಯ ಕಿರಿಕಿರಿಗಳಿಂದ ಅವರಿಗೆ ಮುಕ್ತಿ ಕಲ್ಪಿಸುವ ಕರ್ನಾಟಕ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.


ಇಂತಹ ಕಾನೂನು ಜಾರಿ ಮಾಡಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ಕಾಯ್ದೆಯ ಪ್ರಕಾರ ಸಕಾಲದಲ್ಲಿ ಗಾಯಾಳುಗಳಿಗೆ ನೆರವು ನೀಡಿದವರಿಗೆ ಕರ್ನಾಟಕ ಸರ್ಕಾರ ಆರ್ಥಿಕ ನೆರವನ್ನೂ ಒದಗಿಸಲಿದೆ. ಒಂದು ವೇಳೆ ಗಾಯಾಳುಗಳಿಗೆ ನೆರವಾಗುವವರು ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹಾಜರಾಗುವ ಅನಿವಾರ್ಯತೆ ಬಂದರೆ ಅವರ ಖರ್ಚು ವೆಚ್ಚ ಭರಿಸಲಾಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ನೆರವು ನೀಡಿದವರು ತಕ್ಷಣವೇ ನಿರ್ಗಮಿಸಬಹುದು, ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ವೈದ್ಯರು ಗಾಯಾಳುಗಳನ್ನು ದಾಖಲಿಸಿಕೊಂಡು ಪ್ರಥಮ ಚಿಕಿತ್ಸೆ ಕೊಡುವುದು ಕಡ್ಡಾಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ