ಬೆಂಗಳೂರು : ದೇಶ ರಾಷ್ಟ್ರಪತಿ ಚುನಾವಣೆಗೆ ಸಿದ್ಧವಾಗುತ್ತಿದೆ. ಒಂದೆಡೆ ಪ್ರಧಾನಿ ನೇತೃತ್ವದ ಬಿಜೆಪಿಗೆ ವಿಪಕ್ಷಗಳು ತೊಡೆತಟ್ಟಿ ನಿಂತಿದೆ.
ತೆಲಂಗಾಣದ ಕೆಸಿಆರ್, ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ದೆಹಲಿಯ ಅರವಿಂದ್ ಕೇಜ್ರಿವಾಲ್ ಇಡೀ ವಿಪಕ್ಷಗಳ ಬಣವನ್ನುಒಟ್ಟುೂಡಿಸುವ ಇರಾದೆಯಲ್ಲಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ಹೆಸರಲ್ಲಿ ನಡೀತಾ ಇರೋ ಮೋದಿ ಶತ್ರುಕೂಟದ ಪ್ಲಾನ್ ಎಂಥದ್ದು, ಅವರು ಈ ಯೋಜನೆಯಲ್ಲಿ ಯಶ ಕಾಣ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಹಾಗಾದ್ರೆ ಮೋದಿ ವಿರುದ್ಧದ ರಾಷ್ಟ್ರವ್ಯೂಹದಲ್ಲಿ ವಿಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಲಿರೋದು ಯಾರು..?
ರಾಷ್ಟ್ರಪತಿ ಚುನಾವಣೆ ಬೇರೆಲ್ಲಾ ಚುನಾವಣೆಗಳಂತಲ್ಲ. ಇಲ್ಲಿನ ಲೆಕ್ಕಾಚಾರವೇ ಬೇರೆ. ಅಷ್ಟಕ್ಕೂ ದೇಶದ ಪ್ರಥಮ ಪ್ರಜೆಯನ್ನುಆರಿಸುವ ಚುನಾವಣೆ ಹೇಗೆ ನಡೆಯತ್ತೆ..? ಇಲ್ಲಿ ಮತ ಚಲಾಯಿಸುವ ಹಕ್ಕು ಯಾರಿಗೆಲ್ಲಾ ಇರತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ