ರಾಷ್ಟ್ರಪತಿ ಸ್ಥಾನಕ್ಕೆ ಯಶವಂತ್‌ ಸಿನ್ಹಾ ನಾಮಪತ್ರ ಸಲ್ಲಿಕೆ: ರಾಹುಲ್‌ ಗಾಂಧಿ ಉಪಸ್ಥಿತಿ!

ಸೋಮವಾರ, 27 ಜೂನ್ 2022 (14:25 IST)
ರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯಶವಂತ್‌ ಸಿನ್ಹಾ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದರು.
ದೆಹಲಿಯಲ್ಲಿ ಚುನಾವಣಾಧಿಕಾರಿಗೆ ಯಶವಂತ್‌ ಸಿನ್ಹಾ ನಾಮಪತ್ರ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವು ವಿಪಕ್ ನಾಯಕರು‌ ಉಪಸ್ಥಿತರಿದ್ದರು.
ರಾಹುಲ್‌ ಗಾಂಧಿ ಅಲ್ಲದೇ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಟಿಎಂಸಿ ಪಕ್ಷದ ಅಭಿಷೇಕ್‌ ಬ್ಯಾನರ್ಜಿ, ಜಮ್ಮು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಖ್‌ ಅಬ್ದುಲ್ಲಾ, ಆರ್‌ ಎಲ್‌ ಡಿಯ ಜಯಂತ್‌ ಸಿನ್ಹಾ ಸಿಪಿಎಂನ ಸೀತಾರಾಮ್‌ ಯೆಚೂರಿ, ತೆಲಂಗಾಣ ಸಚಿವ ಕೆಟಿ ರಾಮರಾವ್‌ ಮುಂತಾದವರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ