ಪತ್ನಿ ಅಕ್ಷತಾ ಮೂರ್ತಿ ಜತೆ ಮತ ಚಲಾಯಿಸಿ ಪೋಸ್ಟ್ ಮಾಡಿದ ಪ್ರಧಾನಿ ರಿಷಿ ಸುನಕ್

Sampriya

ಗುರುವಾರ, 4 ಜುಲೈ 2024 (15:55 IST)
Photo Courtesy X
ಬ್ರಿಟನ್:  ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಗುರುವಾರ ಮತದಾನ ಪ್ರಾರಂಭವಾಗುತ್ತಿದ್ದಂತೆ, ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷಕ್ಕೆ ಮತ ಚಲಾಯಿಸುವಂತೆ ಕರೆ ನೀಡಿದರು.

ಲೇಬರ್ ಪಕ್ಷ ಅಧಿಕಾರಕ್ಕೆ ಬಂದರೆ ವಿಪರೀತ ತೆರಿಗೆ ಹೊರೆಯ ಸಂಕಷ್ಟ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿ ಎಂದು ಮತದಾನರಲ್ಲಿ ಮನವಿ ಮಾಡಿಕೊಂಡರು.

ಇನ್ನೂ ಭಾರತ ಮೂಲದ ಮೊದಲ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ  ಅವರೊಂದಿಗೆ ಮತದಾನ ಕೇಂದ್ರದ ಹೊರಗಿನಿಂದ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಯುನೈಟೆಡ್ ಕಿಂಗ್‌ಡಂನಲ್ಲಿನ ಮತದಾನ ಕೇಂದ್ರಗಳು ಇಂದು ಬೆಳಗ್ಗೆ 7 ಗಂಟೆಗೆ (ಸ್ಥಳೀಯ ಕಾಲಮಾನ) ದೇಶದಲ್ಲಿ ಐತಿಹಾಸಿಕ ಕ್ಷಿಪ್ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನಕ್ಕಾಗಿ ತೆರೆಯಲ್ಪಟ್ಟವು.

ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ ಒಟ್ಟು 650 ಕ್ಷೇತ್ರಗಳ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಒಂದು ಪಕ್ಷವು 650 ಸಂಸದೀಯ ಸ್ಥಾನಗಳಲ್ಲಿ ಕನಿಷ್ಠ 326 ಸ್ಥಾನಗಳನ್ನು ಗೆಲ್ಲಬೇಕು ಮತ್ತು ಆ ಪಕ್ಷದ ನಾಯಕ ದೇಶದ ಪ್ರಧಾನಿಯಾಗುತ್ತಾರೆ.
ok
ಹೆಡ್‌ಲೈನ್ ಒಕೆನಾ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ