ಜೈಲಲ್ಲಿರುವ ಕೈದಿಗಳಿಗೆ ಹೆಚ್ಐವಿ ಪಾಸಿಟಿವ್!

ಶನಿವಾರ, 19 ನವೆಂಬರ್ 2022 (13:28 IST)
ಲಕ್ನೋ : ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ದಾಸ್ನಾ ಜೈಲಿನಲ್ಲಿ ಕನಿಷ್ಠ 140 ಕೈದಿಗಳಿಗೆ ಹೆಚ್ಐವಿ ದೃಢಪಟ್ಟಿರುವ ಆಘಾತಕಾರಿ ವಿಷಯ ಹೊರಬಿದ್ದಿದೆ.

ಜೈಲಿನಲ್ಲಿ ಒಟ್ಟು 5,500 ಕೈದಿಗಳಿದ್ದಾರೆ. ಆರೋಗ್ಯ ತಪಾಸಣೆ ವೇಳೆ 140 ಕೈದಿಗಳಿಗೆ ಹೆಚ್ಐವಿ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ 35 ಕೈದಿಗಳಿಗೆ ಟಿಬಿ ಇರುವುದು ಪತ್ತೆಯಾಗಿದೆ.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಹೆಚ್ಐವಿ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ತನಿಖೆ ಹೆಚ್ಐವಿ ಹರಡಿರುವ ವಿಚಾರ ತಿಳಿಯುತ್ತಿದ್ದಂತೆ ಜೈಲಿನಲ್ಲಿರುವ ಕೈದಿಗಳಲ್ಲಿ ಆತಂಕ ಮನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ