ಆರೋಗ್ಯ ಇಲಾಖೆಯಿಂದ ಒಂದರ ಮೇಲೊಂದು ಎಡವಟ್ಟು

ಗುರುವಾರ, 10 ನವೆಂಬರ್ 2022 (17:41 IST)
ಆರೋಗ್ಯ ಇಲಾಖೆಯಲ್ಲಿ ಕಳೆದ ತಿಂಗಳು 108 ಸೇವೆಯಲ್ಲಿ ಸ್ಥಗಿತವಾಗಿದ್ದು, ಈಗ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗಿದೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧ ಕೊರತೆ ಉಂಟಾಗಿದೆ.ಕೆ.ಎಸ್‌.ಎಂ.ಎಸ್‌.ಸಿ.ಎಲ್ ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿದಿಲ್ಲ .ಹೀಗಾಗಿ 44 ಔಷಧಗಳ ಸಮಸ್ಯೆ ಉದ್ಭವವಾಗಿದೆ.ಆರೋಗ್ಯ ಕೇಂದ್ರಗಳ ಬೇಡಿಕೆಗೆ ಅನುಗುಣವಾಗಿ 445 ಔಷಧಗಳ ಪೈಕಿ 210 ಔಷಧಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.ಇವು ಈಗಾಗಲೇ ಸರಬರಾಜು ಉಳಿದ ಅತ್ಯವಶ್ಯಕ 44 ಜೀವ ರಕ್ಷಕ ಔಷಧಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದೆ.ಆದ್ರೆ ಸರಬರಾಜಿಗೆ 60 ದಿನಬೇಕು .ಹೀಗಾಗಿ ಪ್ಯಾರಸಿಟಮೊಲ್ , ಪುಯನ್‌ಜೋಲ್‌ ಕ್ಯಾಪೊಲ್ಸ್‌, ಡಿಸೈಕ್ಲೋಮೈನ್‌ ಹೈಡ್ರೋಕ್ಲೋರೈಡ್‌ ಇಂಜೆಕ್ಷನ್‌,ಫ್ಯೂರೋಸೆಮೈಡ್‌ ಇಂಜೆಕ್ಷನ್‌, ಹಾವು ಕಡಿತ ಚುಚ್ಚುಮದ್ದು, ಮೆಟಿರ್ಮಿನ್‌, ಬ್ಲಿಡ್‌ ಗ್ರೂಪಿಂಗ್‌ ಕಿಟ್‌ ಸೇರಿದಂತೆ ಹಲವು ಔಷಧಗಳ ಕೊರತೆ ಉಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ