ಬೆಳ್ಳಂ ಬೆಳಿಗ್ಗೆ ಗ್ರಾಹಕರಿಗೆ ಶಾಕ್ ಕೊಟ್ಟ ಖಾಸಗಿ ಬ್ಯಾಂಕ್ ಗಳು!

ಗುರುವಾರ, 2 ಮಾರ್ಚ್ 2017 (09:56 IST)
ನವದೆಹಲಿ: ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳು ತಿಂಗಳ ಉಚಿತ ವಹಿವಾಟಿನ ಮೇಲೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಬೆಳಿಗ್ಗೆಯಿಂದಲೇ ಇದನ್ನು ಜಾರಿಗೆ ತಂದಿದೆ. ಇದರಿಂದಾಗಿ ಇಂದಿನಿಂದ ಖಾಸಗಿ ಬ್ಯಾಂಕ್ ಗಳಲ್ಲಿ ಹಣ ಡ್ರಾ ಮಾಡುವವರು ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತ ವ್ಯವಹಾರ ನಡೆಸಬಹುದಾಗಿದೆ.


ಐದನೇ ಬಾರಿಯಿಂದ 150 ರೂ ಶುಲ್ಕ ತೆರಬೇಕಾಗುವುದು. ಅಲ್ಲದೆ, ಮೂರನೇ ವ್ಯಕ್ತಿ ಹಣ ವಹಿವಾಟಿನ ಮಿತಿಯನ್ನು ದಿನಕ್ಕೆ 25 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಎಚ್ ಡಿಎಫ್ ಸಿ, ಆಕ್ಸಿಸ್ ಮತ್ತು ಐಸಿಸಿಐ ಬ್ಯಾಂಕ್ ಗಳು ಇದನ್ನು ಜಾರಿಗೆ ತಂದಿವೆ. ಇದು ಉಳಿತಾಯ ಮತ್ತು ವೇತನ ಖಾತೆಗಳಿಗೆ ಅನ್ವಯವಾಗಲಿದೆ.

ನೋಟು ನಿಷೇಧವಾಗುವುದಕ್ಕಿಂತ ಮೊದಲು ಈ ನಿಯಮ ಜಾರಿಯಲ್ಲಿತ್ತು. ಆದರೆ ನೋಟು ನಿಷೇಧವಾದ ಮೇಲೆ ಈ ನಿಯಮವನ್ನು ಬ್ಯಾಂಕ್ ಗಳು ಕೈ ಬಿಟ್ಟಿತ್ತು. ಇದೀಗ ಮತ್ತೆ ಖಾಸಗಿ ಬ್ಯಾಂಕ್ ಗಳು ವಹಿವಾಟಿನ ಮೇಲೆ ನಿಯಂತ್ರಣ ಹೇರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ