ಪ್ರಮಾಣ ವಚನ ವೇಳೆ ಅಣ್ಣ ರಾಹುಲ್ ಗಾಂಧಿಯನ್ನೇ ಕಾಪಿ ಮಾಡಿದ ಪ್ರಿಯಾಂಕ ವಾದ್ರಾ: ವಿಡಿಯೋ

Krishnaveni K

ಗುರುವಾರ, 28 ನವೆಂಬರ್ 2024 (11:20 IST)
Photo Credit: X
ನವದೆಹಲಿ: ವಯನಾಡು ಲೋಕಸಭೆಯ ಸಂಸದೆಯಾಗಿ ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಅಣ್ಣ ರಾಹುಲ್ ಗಾಂಧಿಯಂತೇ ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಬಂದಿದ್ದರು.

ಈ ಹಿಂದೆ ರಾಹುಲ ಗಾಂಧಿ ಕೂಡಾ ಸಂವಿಧಾನ ಪುಸ್ತಕ ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮೋದಿ ಸರ್ಕಾರಕ್ಕೆ ಟಾಂಗ್ ನೀಡಿದ್ದರು. ಈಗ ಪ್ರಿಯಾಂಕ ಕೂಡಾ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಣ್ಣನ ಹಾದಿಯನ್ನೇ ಹಿಡಿದಿದ್ದಾರೆ.

ಇತ್ತೀಚೆಗೆ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕ ಭರ್ಜರಿ ಮತಗಳಿಂದ ಗೆದ್ದಿದ್ದರು. ಇದೇ ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕಿಳಿದಿದ್ದರು. ಇದೇ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಪ್ರಿಯಾಂಕ ಇಂದು ಲೋಕಸಭೆಯಲ್ಲಿ ಪ್ರಮಾಣ  ವಚನ ಸ್ವೀಕರಿಸಿದ್ದಾರೆ.

ಕೇರಳದ ಸಂಸದೆಯಾಗಿರುವ ಪ್ರಿಯಾಂಕ ಕೇರಳ ಶೈಲಿಯ ಸೀರೆಯಿಟ್ಟುಕೊಂಡು ಬಂದಿದ್ದು ವಿಶೇಷವಾಗಿತ್ತು. ಇದೀಗ ಅಣ್ಣ ರಾಹುಲ್ ಗಾಂಧಿ ಜೊತೆ ಅವರೂ ಲೋಕಸಭೆ ಕಲಾಪದಲ್ಲಿ ಭಾಗಿಯಾಗಲಿದ್ದಾರೆ. ಅವರ ಪ್ರಮಾಣ ವಚನದ ವಿಡಿಯೋ ಇಲ್ಲಿದೆ.


Priyanka Gandhi Vadra consciously avoided taking the oath of office as MP in the name of “ईश्वर”,as is the norm..No wonder she is being referred to as new Muslim League MP from Kerala, wholly respectful towards the sentiments of radicals
pic.twitter.com/7DC55Qt1fr

— Tuhin A. Sinha तुहिन सिन्हा (@tuhins) November 28, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ