ಪ್ರತಿಭಟನೆ : ರೈಲುಗಳ ಸಂಚಾರ ರದ್ದು!

ಗುರುವಾರ, 16 ಜೂನ್ 2022 (15:26 IST)
ಪಾಟ್ನಾ : ಬಿಹಾರದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಕಿಚ್ಚು ಹೆಚ್ಚಿದೆ. ಹಾಗಾಗಿ ಪೂರ್ವ ಮಧ್ಯ ರೈಲ್ವೇಯ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
 
ದೇಶದಲ್ಲಿರುವ ಯುವಕರಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ `ಅಗ್ನಿಪಥ್’ ಅಲ್ಪಾವಧಿಯ ನೇಮಕಾತಿ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ನಿನ್ನೆಯಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಇಂದು ಬಿಹಾರದಲ್ಲಿ ನಡೆಯುತ್ತಿರುವ ಸೇನಾಕಾಂಕ್ಷಿಗಳ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಬಿಹಾರದ ಹಲವು ಭಾಗಗಳಲ್ಲಿ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದ್ದಾರೆ.

ಭಭುವಾ ರೋಡ್ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನ ಗಾಜಿನ ಕಿಟಕಿಗಳನ್ನು ಲಾಠಿಗಳಿಂದ ಒಡೆದು ಹಾಕಿದ್ದು, ರೈಲಿನ ಒಂದು ಕೋಚ್ಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದುಕೊಂಡಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜೊತೆಗೆ 5 ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿ ವೇಳಾಪಟ್ಟಿ ಬಿಡುಗಡೆಗೊಳಿಸಲಾಗಿದೆ. ಪ್ರತಿಭಟನೆಯಿಂದಾಗಿ ಬಿಹಾರದಲ್ಲಿ ಸಂಚರಿಸುತ್ತಿದ್ದ 29 ರೈಲುಗಳ ಮೇಲೆ ಪರಿಣಾಮ ಬೀರಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ