ತನ್ನ ಗರ್ಲ್ ಫ್ರೆಂಡ್ ಜೊತೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಯ ಕೊಲೆಗೆ ಯತ್ನಿಸಿದ ಪಿಯು ವಿದ್ಯಾರ್ಥಿ!
ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ವಿದ್ಯಾರ್ಥಿಗೆ ಕ್ರಶ್ ಇತ್ತು. ಆದರೆ ತನ್ನ ಹುಡುಗಿ ಜೊತೆ ಆಕೆಯ ಸಹಪಾಠಿ ಮಾತನಾಡಿದ್ದು ಈತನಿಗೆ ಸಹಿಸಲಾಗಲಿಲ್ಲ.
ಈ ಕಾರಣಕ್ಕೆ ಉಪಾಯವಾಗಿ ವಿದ್ಯಾರ್ಥಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ 7 ಬಾರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ವಿದ್ಯಾರ್ಥಿ ಬದುಕುಳಿದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.