ಪುಣೆ: ಬೀದಿ ನಾಯಿಯನ್ನು ಬಿಡದ ಕಾಮುಕ, ಕರ್ನಾಟಕದವನ ಮೇಲೆ ಬಿತ್ತು ಪ್ರಕರಣ

Sampriya

ಗುರುವಾರ, 7 ಆಗಸ್ಟ್ 2025 (16:03 IST)
Photo Credit X
ಪುಣೆ: ಟಿಂಗ್ರೆ ನಗರದಲ್ಲಿ ಬೀದಿ ನಾಯಿಯ ಮೇಲೆ ಕಾಮುಕನೊಬ್ಬ ಅತ್ಯಚಾರ ಎಸಗಿದ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅತ್ಯಾಚಾರ ಎಸಗಿದ ಆರೋಪಿಯನ್ನು  ಕರ್ನಾಟಕದ ಕಾರ್ಮಿಕ ಹೊನಪ್ಪ ಹೊಸಮನಿ (35) ಎಂದು ಗುರುತಿಸಲಾಗಿದೆ. ವಿಮಾನ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದ ಜಾಧವ್ ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಹೊಸಮನಿ ವಿರುದ್ಧ ಪ್ರಾಣಿ ಹಿಂಸೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದಾನೆ. ವಿಷಯ ತನಿಖೆಯಲ್ಲಿದೆ, ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಜಾಧವ್ ಹೇಳಿದರು.

ಟಿಂಗ್ರೆ ನಗರದ ನಿವಾಸಿ ಐಶ್ವರ್ಯ ಚಂದನಶಿವೆ (27) ಎಂಬುವರು ಹೊಸಮನಿ ವಿರುದ್ಧ ವಿಮಾನ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಆಕೆಯ ದೂರಿನ ಪ್ರಕಾರ, ಹೊಸಮನಿ ತನ್ನ ಮನೆಯ ಸಮೀಪದಲ್ಲಿ ವಾಸವಾಗಿದ್ದು, ಹಲವಾರು ಸಂದರ್ಭಗಳಲ್ಲಿ ಯಾವುದೇ ಕಾರಣವಿಲ್ಲದೆ ಬೀದಿ ನಾಯಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಆಗಸ್ಟ್ 3 ರಂದು ಹೊಸಮನಿ ಅವರು ಬೀದಿ ನಾಯಿಯನ್ನು ತೆಗೆದುಕೊಂಡು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರದೇಶದ ಟಿನ್ ಶೆಡ್‌ಗೆ ಹೋಗಿದ್ದರು. ದೂರುದಾರರು ಒಳಗೆ ಹೋಗಿ ನೋಡಿದಾಗ ಆರೋಪಿ ನಾಯಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ