ಪಂಜಾಬ್ ಚುನಾವಣೆಯಲ್ಲಿ ಗೆದ್ರೆ ಯುವಕರಿಗೆ ಉಚಿತ 50 ಲಕ್ಷ ಸ್ಮಾರ್ಟ್‌ಫೋನ್ ವಿತರಣೆ: ಕಾಂಗ್ರೆಸ್
ಸೋಮವಾರ, 21 ನವೆಂಬರ್ 2016 (14:53 IST)
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ 50 ಲಕ್ಷ ಸ್ಮಾರ್ಟ್‌ಫೋನ್‌ಗಳ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.
ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಮರಿಂದರ್ ಸಿಂಗ್ ಮಾತನಾಡಿ, ಯುವಕರು ಡಿಜಿಟಲ್ ಇಂಡಿಯಾಗೆ ಸೇರ್ಪಡೆಯಾಗಲು 50 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಉಚಿತವಾಗಿ ವಿತರಿಸುವುದಲ್ಲದೇ ಒಂದು ವರ್ಷದ ಉಚಿತ ಡೇಟಾ ನೀಡುವುದಾಗಿ ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಾಗಿ ನೊಂದಾಯಿಸಿದ ಯುವಕರಿಗೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ 100 ದಿನಗಳೊಳಗಾಗಿ ಸ್ಮಾರ್ಟ್‌ಫೋನ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಮರಿಂದರ್ ಸಿಂಗ್ ಸ್ಮಾರ್ಟ್‌ಫೋನ್ ಯೋಜನೆ ಪ್ರಕಟಿಸುತ್ತಿದ್ದಂತೆ ಕ್ಯಾಪ್ಟನ್‌ಸ್ಮಾರ್ಟ್‌ಕನೆಕ್ಟ್ ಡಾಟ್ ಕಾಮ್ ವೆಬ್‌ಸೈಟ್‌ಗೆ ಸಾವಿರಾರು ಯುವಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಹೆಸರು ನೊಂದಾಯಿಸಿಕೊಳ್ಳಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ.
ಅಮರಿಂದ್ ಸಿಂಗ್ ತಮ್ಮ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸುತ್ತಿದ್ದಂತೆ 1200 ಲೈಕ್‌ಗಳು ಮತ್ತು 8200 ಜನರು ವೀಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ