ಪಂಜಾಬ್ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಸೋಮವಾರ, 23 ಜನವರಿ 2017 (11:10 IST)
ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾನುವಾರ ಜಲಂಧರ್‌ನಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತ, ನಮ್ಮ ಪ್ರಣಾಳಿಕೆ ಪಂಜಾಬ್‌ನಲ್ಲಿ ಸಾಮಾಜಿಕ ಮೂಲಸೌಕರ್ಯ ಉತ್ತಮಗೊಳಿಸುವದರ ಮೇಲೆ ಗುರಿಯನ್ನಿಟ್ಟಿದೆ ಎಂದಿದ್ದಾರೆ.
 
ಕಡಿಮೆ ದರದಲ್ಲಿ ಸಕ್ಕರೆ ಮತ್ತು ತುಪ್ಪ ಪೂರೈಕೆ, ಬಡವರಿಗೆ ಮನೆ, ಒಂದು ಪರಿವಾರ- ಒಂದು ಉದ್ಯೋಗ ಯೋಜನೆ ಜಾರಿಗೆ ತರುವ ಭರವಸೆ, ಬಡ ಹೆಣ್ಣು ಮಕ್ಕಳಿಗೆ ಪಿಹೆಚ್‌ಡಿವರೆಗೂ ಉಚಿತ ಶಿಕ್ಷಣ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ಹಾಗೂ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಏರಿಸುವ ಭರವಸೆ, ಉಗ್ರವಾದದಿಂದ ಬಾಧಿಸಲ್ಪಟ್ಟಿರುವ ಕುಟುಂಬಗಳಿಗೆ ಐದು ಲಕ್ಷ ನೆರವು ಇತ್ಯಾದಿ ವಾಗ್ದಾನಗಳು 16 ಪುಟದ ಪ್ರಣಾಳಿಕೆಯಲ್ಲಿ ಸೇರಿವೆ. 
 
ಪಂಜಾಬ್‌ನಲ್ಲಿ ಬಿಜೆಪಿ ಈ ಹಿಂದಿನಂತೆ ಶಿರೋಮಣಿ ಅಕಾಲಿ ದಳದ ಜತೆಯಾಗಿ ಕಣಕ್ಕಿಳಿಯುತ್ತಿದೆ. 
 
ಒಟ್ಟು 114 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 4 ರಂದು ಒಂದೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 11 ರಂದು ಫಲಿತಾಂಶ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ