ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಘ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ವಜಾಗೊಳಿಸಿದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ೨ ತಿಂಗಳು ಪೂರೈಸುವ ಮುನ್ನವೇ ಭ್ರಷ್ಟಾಚಾರ ಆರೋಪದಿಂದ ತತ್ತರಿಸಿದ್ದು, ೨ ತಿಂಗಳಲ್ಲೇ ಮೊದಲ ವಿಕೆಟ್ ಪತನಗೊಂಡಂತಾಗಿದೆ.
ಗುತ್ತಿಗೆದಾರರಿಂದ ಶೇ.೧ರಷ್ಟು ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆರೋಗ್ಯ ಸಚಿವ ವಿಜಯ್ ಸಿಂಘ್ಲಾ ಅವರನ್ನು ಸಂಪುಟದಿಂದ ವಜಾಮಾಡಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾಗಿ ಸಿಎಂ ಭಗವತ್ ಮನ್ ತಿಳಿಸಿದ್ದಾರೆ.