ರಾಯ್‌ಬರೇಲಿಯಲ್ಲಿ ಮೋದಿಯ ಅಲೆಯಿಲ್ಲ, ಚಂಡಮಾರುತವಿದೆ : ಬಿಜೆಪಿ

ಸೋಮವಾರ, 21 ಏಪ್ರಿಲ್ 2014 (09:53 IST)
ನೆಹರು -ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗಾಂಧಿ ವಿರುದ್ಧ ಕಣಕ್ಕಿಳಿದಿರುವ  ಬಿಜೆಪಿ ಅಭ್ಯರ್ಥಿ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಅಜಯ್ ಅಗರ್ವಾಲ್  ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿಲ್ಲ, ಬದಲಾಗಿ ಚಂಡಮಾರುತವಿದೆ. ಅದು ನನ್ನ ಚುನಾವಣಾ ದೋಣಿಯನ್ನು ದಾಟಿಸಲಿದೆ ಎಂದು ಹೇಳಿದ್ದಾರೆ. 
 
ಸೋನಿಯಾ 2004, 2006, 2009 ರಲ್ಲಿ ಈ ಪ್ರದೇಶದಲ್ಲಿ ಗೆಲುವನ್ನು ದಾಖಲಿಸಿದ್ದು, ಪ್ರತಿ ಬಾರಿ ಅವರು ಪಡೆದ ಮತಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2009ರಲ್ಲಿ ಅವರು ಬಿಎಸ್ಪಿಯ ಆರ್ ಎಸ್ ಕುಶ್ವಾಹರವರನ್ನು 3.72 ಲಕ್ಷ ಮತಗಳ ಭಾರಿ ಅಂತರದಿಂದ ಸೋಲಿಸಿದ್ದರು. ಬಿಜೆಪಿಯ ಆರ್.ಬಿ.ಸಿಂಗ್ 25,444 ಮತಗಳನ್ನು ಪಡೆಯುವುದರ ಜತೆಗೆ 3 ನೇ ಸ್ಥಾನದಲ್ಲಿದ್ದರು. 
 
ಆದರೆ ಈಗ ಸಮಯ ಬದಲಾಗಿದೆ ಎಂದು ಹೇಳಿರುವ ಅಗ್ರವಾಲ್ ರಾಯ್‌ಬರೇಲಿಯಲ್ಲಿ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿಯವರ ವಾಗ್ದಾಳಿಯನ್ನು ಕಡೆಗಣಿಸಿದ್ದಾರೆ.  
 
ಇತ್ತೀಚಿಗೆ ಪ್ರಚಾರ ಸಭೆಯೊಂದನ್ನು ಮಾತನಾಡುತ್ತಿದ್ದ ಪ್ರಿಯಾಂಕಾ ಇಲ್ಲಿ ಕಣಕ್ಕಿಳಿಯುತ್ತಿರುವ ಎರಡನೇ ಅಭ್ಯರ್ಥಿ ಯಾರೆಂದು ನನಗೂ ಗೊತ್ತಿಲ್ಲ. ಮತದಾರರರಿಗೂ ತಿಳಿದಿಲ್ಲ ಎಂದು ಹೇಳಿದ್ದರು. 
 
ಜನಹಿತಕಾರಿ ಅರ್ಜಿಯನ್ನು ದಾಖಲಿಸಲು ಮತ್ತು ಅವುಗಳನ್ನು ವಾದಿಸುವಲ್ಲಿ ಕುಶಲರಾಗಿರುವ ಅಗ್ರವಾಲ್ ಮೊದಲ ಬಾರಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ