ಅಮೆರಿಕ ಮತ್ತು ಯುರೋಪ್ ಬೆಳವಣಿಗೆಗೆ ಉತ್ತೇಜಿಸುವ ಕ್ರಮವಾಗಿ ಬಡ್ಡಿ ದರಗಳನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ಆ ರಾಷ್ಟ್ರಗಳು ಬಡ್ಡಿದರಗಳನ್ನು ಏರಿಸಿದರೆ, ಪ್ರಗತಿ ಕುಂಠಿತವಾಗುತ್ತೆಂಬ ಭಯದಲ್ಲಿ ಸಿಕ್ಕಿಬಿದ್ದಿವೆ ಎಂದು ಪ್ರತಿಕ್ರಿಯಿಸಿದರು.
ಸೆ. 4ರಂದು ಅಧಿಕಾರ ತ್ಯಜಿಸಿದ ರಾಜನ್ ನ್ಯೂಯಾರ್ಕ್ ಟೈಮ್ಸ್ ಜತೆ ಸಂದರ್ಶನದಲ್ಲಿ ಮಾತನಾಡುತ್ತಾ, ದೇಶವು ಈಗ ಕೈಗೊಂಡಿರುವ ಬ್ಯಾಂಕ್ ಶುದ್ಧೀಕರಣ ಕ್ರಿಯೆಯನ್ನು ಮುಗಿಸುತ್ತದೆಂದೂ ಹಾಗೂ ಕಡಿಮೆ ಹಣದುಬ್ಬರಕ್ಕೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತದೆಂದು ಆಶಿಸಿದರು.