ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿಂಗ್, ನಮ್ಮ ಪಕ್ಷ ಆರಂಭದಿಂದಲೂ ಯುವ ಜನರಿಗೆ ಉತ್ತೇಜನ ನೀಡುತ್ತಿದೆ. ದೇಶದ ಜನಸಂಖ್ಯಾ ಪಾರ್ಶ್ವಚಿತ್ರ ಬದಲಾಗಿದೆ. ಭಾರತವೀಗ ಹೆಚ್ಚು ಯುವದೇಶವಾಗಿದೆ. ಹೀಗಾಗಿ ನಮಗೆ ಹೊಸ ವಿಚಾರಗಳ, ಹೊಸ ನಾಯಕತ್ವದ ಮತ್ತು ಕಾರ್ಯನಿರ್ವಹಣೆಯ ಹೊಸ ದಾರಿಯ ಅಗತ್ಯವಿದೆ ಎಂದಿದ್ದಾರೆ.