ರೈತ ಬಜೆಟ್ ಮಂಡಿಸಲು ರಾಹುಲ್ ಒತ್ತಾಯ

ಗುರುವಾರ, 22 ಸೆಪ್ಟಂಬರ್ 2016 (15:31 IST)
ದೇಶದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದ್ದು ಸರ್ಕಾರ ಮಧ್ಯ ಪ್ರವೇಶಿಸುವ ಜರೂರ್ ಅಗತ್ಯ ಕಾಣುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದು, ಮುಂದಿನ ಅಧಿವೇಶನದಲ್ಲಿ ಪ್ರತ್ಯೇಕ ರೈತ ಬಜೆಟ್ ಮಂಡಿಸಲು ಒತ್ತಾಯಿಸಿದ್ದಾರೆ. 

 
ಕಾನ್ಪುರದ ಘಟಮ್ಪುರದಲ್ಲಿ ಖಾತ್ ಸಭಾ ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ರೈಲು ಮತ್ತು ಸಾಮಾನ್ಯ ಬಜೆಟ್ ವಿಲೀನಗೊಳಿಸುತ್ತಿದ್ದಾರೆ.  ಮೋದಿ ಅವರು ರೈತರಿಗಾಗಿ ಪ್ರತ್ಯೇಕ ಬಜೆಟ್‌ನ್ನು ಸಹ ಜಾರಿಯಲ್ಲಿ ತರಬೇಕು. ಅದರಲ್ಲವರು ಸರ್ಕಾರ ರೈತರಿಗಾಗಿ ಏನನ್ನು ಮಾಡಲಿದೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ಕೃಷಿ ಕ್ಷೇತ್ರ ತುರ್ತು ಗಮನ ಮತ್ತು ನೆರವನ್ನು ಅಪೇಕ್ಷಿಸುತ್ತಿದೆ. ರೈತ ಸಮುದಾಯಕ್ಕೆ ಅಭಿವೃದ್ಧಿಯಾಗಲು ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ. 
 
ರೈತ ಬಜೆಟ್ ಮಂಡನೆಯಿಂದ ರೈತರಿಗೆ ತಮಗಾಗಿ ಜಾರಿಯಲ್ಲಿ ತಂದ ಯೋಜನೆ ಮತ್ತು ಅದಕ್ಕಾಗಿ ವಿನಿಯೋಗಿಸಿದ ಹಣದ ವಿವರ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಈ ಕುರಿತು ನಾನು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಮತ್ತು ನಿಮ್ಮ ಉತ್ಪಾದನೆಗೆ ಉತ್ತಮ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದು ರಾಹುಲ್ ಗಾಂಧಿ ರೈತರನ್ನುದ್ದೇಶಿಸಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ