ಅರುಣ್ ಜೇಟ್ಲಿ ಪುತ್ರಿ ಮೇಲೆ ರಾಹುಲ್ ಗಾಂಧಿ ಭಾರೀ ಆರೋಪ!

ಮಂಗಳವಾರ, 13 ಮಾರ್ಚ್ 2018 (09:04 IST)
ನವದೆಹಲಿ: ಇಷ್ಟು ದಿನ ಕೇಂದ್ರ ಸರ್ಕಾರದ ವಿರುದ್ಧ ರಾಫೇಲ್ ಡೀಲ್ ಬಗ್ಗೆ ಕೆಣಕುತ್ತಿದ್ದ ರಾಹುಲ್ ಗಾಂಧಿ ಇದೀಗ ವಿತ್ತ ಸಚಿವ ಅರುಣ್ ಜೇಟ್ಲಿ ಪುತ್ರಿ ವಿರುದ್ಧ ಹೊಸ ಬಾಂಬ್ ಹಾಕಿದ್ದಾರೆ.

ಪಂಜಾಬ್ ಬ್ಯಾಂಕ್ ಗೆ ಉದ್ಯಮಿ ನೀರವ್ ಮೋದಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದ ರಾಹುಲ್ ಗಾಂಧಿ ಇದೀಗ ವಿತ್ತ ಸಚಿವ ಜೇಟ್ಲಿ ಪುತ್ರಿ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿದ್ದಾರೆ.

ನೀರವ್ ಮೋದಿಯಿಂದ ಭಾರೀ ಮೊತ್ತದ ಹಣವನ್ನು ಜೇಟ್ಲಿ ಪುತ್ರಿ ಪಡೆದಿದ್ದರು ಎಂದು ರಾಹುಲ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ‘ಇಷ್ಟು ದಿನವಾದರೂ ವಿತ್ತ ಸಚಿವ ಅರುಣ್ ಜೇಟ್ಲಿ ಪಂಜಾಬ್ ಬ್ಯಾಂಕ್ ಅವ್ಯವಹಾರದ ಬಗ್ಗೆ ತುಟಿ ಬಿಚ್ಚಿಲ್ಲ ಯಾಕೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

ಇದಕ್ಕೆ ಕಾರಣ ಜೇಟ್ಲಿಯವರ ವಕೀಲೆ ಮಗಳು. ಆಕೆ ಹಗರಣ ಪಬ್ಲಿಕ್ ಆಗುವ ಮೊದಲು ಭಾರೀ ಮೊತ್ತದ ಹಣ ಜೇಬಿಗಿಳಿಸಿಕೊಂಡಿದ್ದಾರೆ. ಆರೋಪಿಯ ಇತರ ಕಾನೂನು ಸಂಸ್ಥೆಗಳ ಮೇಲೆ ದಾಳಿಯಾಗುತ್ತಿರುವಾಗಲೂ ಜೇಟ್ಲಿ ಪುತ್ರಿಯ ಸಂಸ್ಥೆಯ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ?’ ಎಂದು ರಾಹುಲ್ ಟ್ವೀಟ್ ನಲ್ಲಿ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ