ಕೇರಳ ಪ್ರವಾಸದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ ರಾಹುಲ್ ಗಾಂಧಿ
ಕಾರ್ಯಕ್ರಮ ಮುಗಿಸಿ ಆಲಪ್ಪುಳದ ತಮ್ಮ ಹೆಲಿಕಾಪ್ಟರ್ ಏರಲು ಹೊರಟಿದ್ದ ರಾಹುಲ್ ಗಾಂಧಿಗೆ ಅದೇ ಹೆಲಿಪ್ಯಾಡ್ ನಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ ಏರ್ ಆಂಬ್ಯುಲೆನ್ಸ್ ಕಂಡುಬಂತು. ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಗೆ ಇದರ ಬಗ್ಗೆ ರಾಹುಲ್ ವಿಚಾರಿಸಿದಾಗ ಇದು ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಿದ್ಧವಾಗಿ ನಿಂತಿದ್ದ ಹೆಲಿಕಾಪ್ಟರ್ ಎಂದು ತಿಳಿದುಬಂತು.
ಹೀಗಾಗಿ ರಾಹುಲ್ ಮೊದಲು ಏರ್ ಆಂಬ್ಯುಲೆನ್ಸ್ ಗೆ ಮೊದಲು ಹಾರಾಟಕ್ಕೆ ಅವಕಾಶ ಕೊಟ್ಟು, ತಾವು ನಂತರ ಹೆಲಿಕಾಪ್ಟರ್ ಮೂಲಕ ಸಾಗಿದರು. ಈ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾದರು.