ರಾಜ್ಯದ ಶಾಸಕರು, ಸಚಿವರಿಗೆ ಕಾಡುತ್ತಿದೆ ಫೋನ್ ಟ್ಯಾಪಿಂಗ್ ಭಯ!
ಬುಧವಾರ, 29 ಆಗಸ್ಟ್ 2018 (08:37 IST)
ಬೆಂಗಳೂರು: ಮೈತ್ರಿ ಸರ್ಕಾರದ ಕೆಲವು ಶಾಸಕರು ಬಂಡಾಯವೆದ್ದು, ಸರ್ಕಾರ ಉರುಳಿಸಲು ಸಂಚು ನಡೆಸಿದ್ದಾರೆಂಬ ಗುಮಾನಿ ಹಿನ್ನಲೆಯಲ್ಲಿ ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬ ಭಯ ಶುರುವಾಗಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನ ಕೆಲವು ಪ್ರಮುಖ ಶಾಸಕರ ಫೋನ್ ಟ್ಯಾಪಿಂಗ್ ಕಳೆದ ಒಂದು ವಾರದಿಂದ ನಡೆಯುತ್ತಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಪ್ತರ ದೂರವಾಣಿ ಕದ್ದಾಲಿಕೆಯಾಗುತ್ತಿದೆ ಎನ್ನಲಾಗಿದೆ.
ಹೀಗಾಗಿ ಶಾಸಕರು, ಸಚಿವರು ಪ್ರಮುಖ ವಿಚಾರಗಳನ್ನು ಮಾತನಾಡಲು ಲ್ಯಾಂಡ್ ಲೈನ್ ಬಳಸುವಂತಾಗಿದೆ. ಮೊಬೈಲ್ ಮೂಲಕ ಯಾವುದೇ ವ್ಯವಹಾರ ಮಾಡದೇ ಇರಲು ರಾಜಕೀಯ ನಾಯಕರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇದೀಗ ಎಲ್ಲಾ ರಾಜಕೀಯ ಪಕ್ಷಗಳೂ ಎಚ್ಚರಿಕೆಯಿಂದಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.