Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು
ಆಪರೇಷನ್ ಸಿಂಧೂರ್ ನಡೆಸುವ ಮೊದಲು ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿದೆ ಜೈಶಂಕರ್ ಹೇಳಿದ್ದಾರೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ದಾಳಿ ವೇಳೆ ಭಾರತದ ಎಷ್ಟು ಯುದ್ಧ ವಿಮಾನಗಳು ನಾಶವಾಗಿದೆ ಎಂದು ಮಾಹಿತಿ ಕೊಡಿ ಎಂದು ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು.
ಇದಕ್ಕೀಗ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿಯ ಅಮಿತ್ ಮಾಳ್ವಿಯಾ ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನದ ಪರವಾಗಿಯೇ ಮಾತನಾಡುತ್ತಿದ್ದಾರೆ. ಅವರು ದೇಶಕ್ಕೆ ಅಂಟಿದ ಪಾಪ. ರಾಹುಲ್ ಗಾಂಧಿ ಗಮನಕ್ಕೆ ತರಲು ಮತ್ತು ದೇಶದ ಹಿತದೃಷ್ಟಿಯಿಂದ ಈ ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗಲೂ ಇದನ್ನೇ ಮಾಡಿದ್ದರು ಎಂದು ಈ ಸಂದರ್ಭದಲ್ಲಿ ಉಲ್ಲೇಖಿಸಲು ಬಯಸುತ್ತೇನೆ ಎಂದಿದ್ದಾರೆ. ರಾಹುಲ್ ಗಾಂಧಿ ಯಾವತ್ತೂ ಪಾಕಿಸ್ತಾನಿಯರಂತೆ ಮಾತನಾಡುತ್ತಾರೆ. ಅವರಿಗೆ ಮತ್ತು ಅವರ ಪಕ್ಷ ನಿಜವಾಗಿಯೂ ದೇಶವನ್ನು ಬೆಂಬಲಿಸುತ್ತದೆಯೇ ಎಂದು ಅಮಿತ್ ಪ್ರಶ್ನಿಸಿದ್ದಾರೆ.