ಅಹಮ್ಮದಾಬಾದ್: ಗುಜರಾತ್ ಮತದಾರರನ್ನು ಸೆಳೆಯಲು ರ್ಯಾಲಿ ಜತೆಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿವಾದಕ್ಕೊಳಗಾಗಿದ್ದಾರೆ.
ಚುನಾವಣಾ ಪ್ರಚಾರಕ್ಕೆಂದು ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ನಿನ್ನೆ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಧರ್ಮದ ಬಗ್ಗೆ ವಿವಾದ ಅಂಟಿಕೊಂಡಿದೆ.
ದೇವಾಲಯಕ್ಕೆ ಭೇಟಿ ನೀಡಿರುವ ರಾಹುಲ್ ತೆರಳುವ ಮುನ್ನ ಹಿಂದೂಯೇತರ ರಿಜಿಸ್ಟ್ರಿ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಬಿಜೆಪಿ ಟ್ವೀಟ್ ಮಾಡಿದ್ದು ರಾಹುಲ್ ಹಿಂದೂ ಅಲ್ಲ ಎಂದು ವಿವಾದವೆಬ್ಬಿಸಿದೆ.
ಚುನಾವಣೆಗಾಗಿ ಮತದಾರರನ್ನು ಮೂರ್ಖರಾಗಿಸಲು ರಾಹುಲ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಇನ್ನೊಂದೆಡೆ ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್ ರಾಹುಲ್ ಒಬ್ಬ ಹಿಂದೂ. ಅಷ್ಟೇ ಅಲ್ಲ, ಜನಿವಾರಧಾರಿ ಹಿಂದೂ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಬಾರದು ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ