ಏಕತೆಗೆ ರಾಹುಲ್ ಗಾಂಧಿ ಅಪಾಯಕಾರಿ : ಕಿರಣ್ ರಿಜಿಜು

ಶನಿವಾರ, 11 ಮಾರ್ಚ್ 2023 (10:06 IST)
ನವದೆಹಲಿ : ನಮ್ಮ ದೇಶದ ಏಕತೆಗೆ ರಾಹುಲ್ ಗಾಂಧಿ ಅಪಾಯಕಾರಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
 
ಲಂಡನ್ನಲ್ಲಿ ರಾಹುಲ್ಗಾಂಧಿ ಮಾಡಿರುವ ಭಾಷಣಗಳ ವಿರುದ್ಧ ಕಿರಣ್ ರಿಜಿಜು ಕಿಡಿಕಾರಿದ್ದಾರೆ. ತನ್ನನ್ನು ತಾನು ಕಾಂಗ್ರೆಸ್ ರಾಜಕುಮಾರ ಎಂದು ಹೇಳಿಕೊಳ್ಳುವ ವ್ಯಕ್ತಿ ಎಲ್ಲಾ ಮಿತಿಗಳನ್ನು ಮೀರಿದ್ದಾರೆ.

ಅವರು ದೇಶದ ಏಕತೆಗೆ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  `ಏಕ್ ಭಾರತ್-ಶ್ರೇಷ್ಠ ಭಾರತ್’ ಎಂಬುದು ಪ್ರಧಾನಿ ಮೋದಿ ನಿನಾದ. ರಾಹುಲ್ಗಾಂಧಿ ದೇಶವನ್ನು ವಿಭಜಿಸುವಂತೆ ಜನತೆಗೆ ಕರೆ ನೀಡುತ್ತಿದ್ದಾರೆ ಎಂದು ಕಿರಣ್ ರಿಜಿಜು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. 

ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇದ್ದಿದ್ರೆ, ವಿದೇಶದಲ್ಲಿ ಭಾರತವನ್ನ ಟೀಕೆ ಮಾಡ್ತಿರಲಿಲ್ಲ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ