ಆರ್‌ಎಸ್‌ಎಸ್ ಒಂದು ರಹಸ್ಯ ಸಂಘ : ರಾಹುಲ್ ಗಾಂಧಿ

ಬುಧವಾರ, 8 ಮಾರ್ಚ್ 2023 (09:59 IST)
ನವದೆಹಲಿ : ಆರ್ಎಸ್ಎಸ್ ಒಂದು ರಹಸ್ಯ ಸಂಘವಾಗಿದ್ದು ಇದು ಮುಸ್ಲಿಂ ಬ್ರದರ್ಹುಡ್ ರೀತಿಯಲ್ಲಿ ರೂಪಿತವಾಗಿದೆ. ಪ್ರಜಾಪ್ರಭುತ್ವದ ಮೂಲಕವಾಗಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವವವನ್ನೇ ದಮನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
 
ಲಂಡನ್ ಪ್ರವಾಸದಲ್ಲಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಛಾತಂಹೌಸ್ ಥಿಂಕ್ಟ್ಯಾಂಕ್ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಭಾರತದಲ್ಲಿ ಪ್ರಜಾಪ್ರಭುತ್ವದ ಸ್ವರೂಪವೇ ಸಂಪೂರ್ಣವಾಗಿ ಬದಲಾಗಿವೆ.

ಏಕೈಕ ಕಾರಣ ಆರ್ಎಸ್ಎಸ್. ಇದು ಫ್ಯಾಸಿಸ್ಟ್ ಸಂಸ್ಥೆಯಾಗಿದ್ದು ದೇಶದ ಎಲ್ಲಾ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇವರು ಸಾಧಿಸುತ್ತಿರುವ ಗೆಲುವುಗಳು ನಮ್ಮನ್ನು ಶಾಕ್ ಮಾಡುತ್ತಿವೆ. ಮಾಧ್ಯಮಗಳು, ನ್ಯಾಯವ್ಯವಸ್ಥೆ, ಸಂಸತ್, ಚುನಾವಣಾ ಆಯೋಗ ಹೀಗೆ ಎಲ್ಲವು ಅಪಾಯದ ಅಂಚಿನಲ್ಲಿವೆ. ಇವೆಲ್ಲಾ ನೇರ ಅಥವಾ ಪರೋಕ್ಷವಾಗಿ ಆರ್ಎಸ್ಎಸ್ ನಿಯಂತ್ರಣದಲ್ಲಿವೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ