ಪ್ರಧಾನಿ ವಿರುದ್ಧ ಹೊಸ ಆರೋಪ ಮಾಡಿದ ರಾಹುಲ್ ಗಾಂಧಿ

ಮಂಗಳವಾರ, 5 ಸೆಪ್ಟಂಬರ್ 2017 (08:24 IST)
ನವದೆಹಲಿ: ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೊಸ ಆರೋಪ ಮಾಡಿದ್ದಾರೆ.


ಗುಜರಾತ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಅಹಮ್ಮದಾಬಾದ್ ನಲ್ಲಿ ಮಾತನಾಡಿದ ಅವರು ಮೋದಿ ತವರಿನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕೆಲವರು ಸರ್ಕಾರದ ವಿರುದ್ಧ ಬರೆಯಲು ಬಯಸುತ್ತಾರೆ. ಆದರೆ ಅವರ ಬರವಣಿಗೆಯನ್ನು ಅಧಿಕಾರಯುತವಾಗಿ ತಡೆಹಿಡಿಯಲಾಗಿದೆ. ಪ್ರಧಾನಿ ಮೋದಿ ಸರ್ವಾಧಿಕಾರದ ಧೋರಣೆಯಲ್ಲಿ ಇಂತಹ ಬರಹಗಾರರ ಧ್ವನಿ ಹತ್ತಿಕ್ಕಲಾಗುತ್ತಿದೆ’ ಎಂದು ಮೋದಿ ವಿರುದ್ಧ ರಾಹುಲ್ ಆರೋಪಿಸಿದ್ದಾರೆ.

‘ಗುಜರಾತ್ ಜನರಿಗೂ ಬಿಜೆಪಿಯ ಕಪಟ ನಾಟಕ ನೋಡಿ ಸಾಕಾಗಿದೆ. ಈ ಬಾರಿ ಖಂಡಿತಾ ನಾವು ಅಧಿಕಾರಕ್ಕೆ ಬರುತ್ತೇವೆ. ಯಾರಿಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ.. ಹಾರ್ದಿಕ್ ಪಾಂಡ್ಯ ಜತೆಗೆ ಲವ್ ಬಗ್ಗೆ ಪರಿಣಿತಿ ಚೋಪ್ರಾ ಹೇಳಿದ್ದು ಹೀಗೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ