ರಾಷ್ಟ್ರವಿರೋಧಿಗಳಿಗೆ ಅಧಿಕಾರ ನೀಡಿರುವ ಪ್ರಧಾನಿ ಮೋದಿ: ರಾಹುಲ್

ಬುಧವಾರ, 31 ಮೇ 2017 (17:10 IST)
ರಾಷ್ಟ್ರ ವಿರೋಧಿಗಳಿಗೆ ಕಡಿವಾಣ ಹಾಕುವ ಬದಲಿಗೆ ಅಂತಹ ಶಕ್ತಿಗಳಿಗೆ ಬೆಂಬಲಿಸುತ್ತಿರುವುದರಿಂದ ಜಮ್ಮು ಕಾಶ್ಮಿರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
 
ಸಹರಣ್‌ಪುರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ ಜಮ್ಮು ಕಾಶ್ಮಿರದಲ್ಲಿ ಶಾಂತಿ ನೆಲೆಸಿತ್ತು. ಮೋದಿ ಸರಕಾರ ಕಣಿವೆಯಲ್ಲಿ ಶಾಂತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
 
ಯುಪಿಎ ಸರಕಾರದ ಹತ್ತು ವರ್ಷಗಳ ಅವಧಿಯಲ್ಲಿ ಜಮ್ಮು ಕಾಶ್ಮಿರದಾದ್ಯಂತ ಶಾಂತಿ, ಸಹೋದರತೆ, ಸಹಭಾಳ್ವೆ ನೆಲೆಸಿತ್ತು. ಪ್ರಸ್ತುತ ಸ್ಥಿತಿ ಕಳವಳಕಾರಿಯಾಗಿದೆ. ಜಮ್ಮು ಕಾಶ್ಮಿರದಲ್ಲಿ ಶಾಂತಿ ನೆಲೆಸಿದಲ್ಲಿ ಭಾರತಕ್ಕೆ ಲಾಭವಾಗುತ್ತದೆ. ಹಿಂಸಾಚಾರ ನಡೆದಲ್ಲಿ ಪಾಕಿಸ್ತಾನಕ್ಕೆ ಲಾಭವಾಗುತ್ತದೆ. ಇದೆಲ್ಲೆ ಪ್ರಧಾನಿ ಮೋದಿಯವರ ಸೃಷ್ಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಇಂದು ಬೆಳಿಗ್ಗೆ ಜಮ್ಮು ಕಾಶ್ಮಿರದಲ್ಲಿ ಭಾರತೀಯ ಸೇನಾಪಡೆಗಳ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಸೇನಾಪಡೆಗಳು ಹತ್ಯೆಗೈದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ