ನನಗೆ ವಿಶ್ವಾಸವಿದೆ, ಪ್ರಿಯಾಂಕ ರೂಪದಲ್ಲಿ ವಯನಾಡಿಗೆ ಬೆಸ್ಟ್ ಸಂಸದೆ ಸಿಗುತ್ತಾರೆ. ಆಕೆಯ ಪರಿಶ್ರಮವೇ ಇದನ್ನು ತೋರಿಸುತ್ತದೆ. ಆಕೆ ಈಗಾಗಲೇ ವಯನಾಡಿನ ಅಭಿವೃದ್ಧಿಗೆ, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಏನು ಮಾಡಬಹುದು ಎಂದು ಯೋಜನೆ ರೂಪಿಸುತ್ತಿದ್ದಾಳೆ ಎಂದು ರಾಹುಲ್ ಹಾಡಿ ಹೊಗಳಿದ್ದಾರೆ.
ಇಷ್ಟು ದಿನ ಪ್ರಿಯಾಂಕ ನನಗೆ ಉತ್ತಮ ಸಹೋದರಿಯಾಗಿದ್ದಳು. ನನಗೆ ಭರವಸೆಯಿದೆ, ಮುಂದೆ ಅವಳು ನಿಮಗೆ ಕೇವಲ ಸಂಸದೆಯಾಗಿ ಮಾತ್ರ ಇರುವುದಿಲ್ಲ, ನಿಮ್ಮ ತಂಗಿಯಾಗಿ, ಮಗಳಾಗಿ, ನಿಮ್ಮೆಲ್ಲರ ಪರವಾಗಿ ವಾದ ಮಾಡುವ ಪ್ರತಿನಿಧಿಯಾಗಿರುತ್ತಾಳೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.