ವಿದೇಶಾಂಗ ಸಚಿವರನ್ನು ಕಳುಹಿಸಿ ಪ್ರಧಾನಿ ಮೋದಿಯನ್ನು ಅಮೆರಿಕಾಗೆ ಆಹ್ವಾನಿಸಲು ಭಿಕ್ಷೆ ಬೇಡಿದ್ರು: ರಾಹುಲ್ ಗಾಂಧಿ ಲೇವಡಿ

Krishnaveni K

ಸೋಮವಾರ, 3 ಫೆಬ್ರವರಿ 2025 (16:07 IST)
ನವದೆಹಲಿ: ಲೋಕಸಭೆ ಕಲಾಪದಲ್ಲಿ ಇಂದು ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ರನ್ನು ಅಮೆರಿಕಾಗೆ ಕಳುಹಿಸಿ ನಮ್ಮ ಪ್ರಧಾನಿಯನ್ನು ಅಲ್ಲಿಗೆ ಕರೆಸಿಕೊಳ್ಳಲು ಭಿಕ್ಷೆ ಬೇಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಫೆಬ್ರವರಿಯಲ್ಲಿ ಅಮೆರಿಕಾಗೆ ಭೇಟಿ ನೀಡಲಿದ್ದಾರೆ ಎಂದು ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಇದಕ್ಕೆ ಮೊದಲು ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೋಗಿದ್ದರು. ಇದನ್ನೇ ರಾಹಲ್ ಇಂದು ಲೋಕಸಭೆಯಲ್ಲಿ ಅಣಕವಾಡಿದ್ದಾರೆ.

ನಮ್ಮ ದೇಶದ ಉತ್ಪಾದಕತೆ ಚೆನ್ನಾಗಿದ್ದರೆ ವಿದೇಶಾಂಗ ಸಚಿವರನ್ನು ಅಮೆರಿಕಾಗೆ ಕಳುಹಿಸಿ ನಮ್ಮ ಪ್ರಧಾನಿಯನ್ನು ನಿಮ್ಮ ದೇಶಕ್ಕೆ ಕರೆಸಿಕೊಳ್ಳಿ ಎಂದು ಭಿಕ್ಷೆ ಬೇಡಬೇಕಾಗಿರಲಿಲ್ಲ ಎಂದು ರಾಹುಲ್ ವ್ಯಂಗ್ಯ ಮಾಡಿದ್ದಾರೆ.

ಇದಕ್ಕೆ ವಿಪಕ್ಷದ ಸದಸ್ಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದಲ್ಲದೆ, ಚೀನಾ ನಮ್ಮ ದೇಶದ ಗಡಿಭಾಗವನ್ನು ಅತಿಕ್ರಮಿಸಿಕೊಂಡಿದೆ ಎಂದೂ ಅವರು ಹೇಳಿದ್ದಾರೆ. ಪ್ರಧಾನಿಗಳು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ, ಆದರೆ ಸೇನಾಧಿಕಾರಿಗಳು ನಿಜ ಹೇಳುತ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ