ಪ್ರಧಾನಿ ಮೋದಿಯದ್ದು ದಲಿತ ವಿರೋಧ ಮನಸ್ಥಿತಿ: ರಾಹುಲ್ ಗಾಂಧಿ
ದೆಹಲಿಯ ಜಂಥರ್ ಮಂಥರ್ ನಲ್ಲಿ ನಡೆದ ಎಸ್ ಎಸ್ಟಿ ಖಾಯಿದೆ 1989 ರನ್ನು ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
‘ನಮ್ಮ ಕನಸಿನ ಭಾರತದಲ್ಲಿ ಜಾತಿ, ಧರ್ಮ, ವರ್ಗದ ಬೇಧವಿಲ್ಲದೇ ಎಲ್ಲಾ ಪಂಗಡದವರಿಗೂ ಸಮಾನ ಅವಕಾಶವಿರಬೇಕು. ಎಲ್ಲರೂ ಅಭಿವೃದ್ಧಿಯಾಗಬೇಕು. ಅಂತಹ ಭಾರತವನ್ನು ನಾವು ನೋಡಲು ಬಯಸುತ್ತೇವೆ. ಆದರೆ ಕೇಂದ್ರದ ಮೋದಿ ಸರ್ಕಾರಕ್ಕೆ ದಲಿತರನ್ನು ದಮನಿಸುವುದೇ ಕೆಲಸ’ ಎಂದು ರಾಹುಲ್ ಟೀಕಿಸಿದ್ದಾರೆ.