ಅವಧಿ ಮುಗಿದರೂ ಬಿಜೆಪಿಗೆ ಅಮಿತ್ ಶಾ ಅವರೇ ಸಾರಥಿ
ಇದೇ ವರ್ಷ ಅಂತ್ಯದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಬಿಜೆಪಿಗೆ ಹೊಸದಾಗಿ ಅಧ್ಯಕ್ಷರನ್ನು ನೇಮಕ ಮಾಡಿದರೆ ಪಕ್ಷ ಸಂಘಟನೆಗೆ ತೊಂದರೆಯಾಗುತ್ತದೆ. ಜತೆಗೆ ಅಮಿತ್ ಶಾ ಅಧ್ಯಕ್ಷರಾಗಿ ಬಿಜೆಪಿಯನ್ನು ಹಲವು ರಾಜ್ಯಗಳಲ್ಲಿ ಗೆಲ್ಲಿಸಿದ ಖ್ಯಾತಿ ಹೊಂದಿದ್ದಾರೆ.
ಹೀಗಾಗಿ 2019 ರ ಲೋಕಸಭೆ ಚುನಾವಣೆಯವರೆಗೂ ಅಮಿತ್ ಶಾ ಅವರೇ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯಲಿರುವುದು ಖಚಿತವಾಗಿದೆ. ಅದಾದ ಬಳಿಕ ಹೊಸ ಅಧ್ಯಕ್ಷರನ್ನು ಪಕ್ಷ ನೇಮಕ ಮಾಡುತ್ತಾ ಅಥವಾ ಅಮಿತ್ ಶಾ ಅವರೇ ಮುಂದುವರಿಯುತ್ತಾರಾ ಕಾದು ನೋಡಬೇಕಿದೆ.