ನವದೆಹಲಿ: ಸಂವಿಧಾನಕ್ಕೆ 1000 ವರ್ಷ ಇತಿಹಾಸವಿದೆ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಬಿಜೆಪಿ ನಿಮ್ಮ ಮಾತಿಗೆ ದೇಶವೇ ಶಾಕ್ ಆಗಿದೆ ಎಂದು ಲೇವಡಿ ಮಾಡಿದೆ.
ರಾಹುಲ್ ಗಾಂಧಿ ನಿನ್ನೆ ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಎಂದಿನಂತೆ ಸಂವಿಧಾನದ ಪುಸ್ತಕ ಹಿಡಿದು ಭಾಷಣ ಮಾಡಿದ್ದಾರೆ. ಈ ವೇಳೆ ಎಲ್ಲರೂ ಸಂವಿಧಾನ 1947 ರಲ್ಲಿ ರಚನೆಯಾಯಿತು ಎನ್ನುತ್ತಾರೆ.
ಆದರೆ ಅದು ಹಾಗಲ್ಲ. ಈ ಸಂವಿಧಾನ 1000 ವರ್ಷಗಳ ಹಿಂದೆಯೇ ರಚನೆಯಾಗಿದೆ ಎಂದು ಹೇಳಿದ್ದಾರೆ. ಆಗ ಅಲ್ಲಿದ್ದವರು ಭಾರೀ ಕರಾಡತನ ಮಾಡುವ ಮೂಲಕ ರಾಹುಲ್ ಗಾಂಧಿಗೆ ಜೈಕಾರ ಹಾಕುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದಕ್ಕೀಗ ಬಿಜೆಪಿ ಪ್ರತಿಕ್ರಿಯೆ ನೀಡಿತ್ತು. ಅಬ್ಬಬ್ಬಾ ಎಂಥಾ ಹೇಳಿಕೆ, ನಿಮ್ಮ ಹೇಳಿಕೆಗೆ ಇಡೀ ದೇಶವೇ ಶಾಕ್ ಆಗಿದೆ. ನಿಮ್ಮ ಅದ್ಭುತ ಜ್ಞಾನ ಭಂಡಾರದ ಮೂಲಕ ಯಾವತ್ತೂ ದೇಶವನ್ನೇ ನಿಬ್ಬೆರಗಾಗಿಸುತ್ತೀರಿ ಎಂದು ಬಿಜೆಪಿ ಟ್ವೀಟ್ ಮೂಲಕ ಲೇವಡಿ ಮಾಡಿದೆ.