ಚಿನ್ನಕ್ಕೆ ಬೆಳ್ಳುಳ್ಳಿಗಿಂತ ಕಡಿಮೆ ದರ ಇರಬಹುದಲ್ವಾ: ಮಾರ್ಕೆಟ್ ನಲ್ಲಿ ರಾಹುಲ್ ಗಾಂಧಿ ರೌಂಡ್ಸ್ ವಿಡಿಯೋ

Krishnaveni K

ಮಂಗಳವಾರ, 24 ಡಿಸೆಂಬರ್ 2024 (15:24 IST)
Photo Credit: X
ನವದೆಹಲಿ: ದೆಹಲಿಯ ಗಿರಿ ನಗರ್ ಮಾರ್ಕೆಟ್ ಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಥಳೀಯ ಮಹಿಳೆಯರೊಂದಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರೆ.
 

ದೆಹಲಿ ಮಾರ್ಕೆಟ್ ರೌಂಡ್ಸ್ ಮಾಡಿದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ’40 ರೂ. ಇದ್ದ ಬೆಳ್ಳುಳ್ಳಿ ಬೆಲೆ 400 ರೂ. ಗೆ ಬಂದು ತಲುಪಿದೆ. ಬೆಲೆ ಏರಿಕೆ ಈ ಮಟ್ಟಿಗೆ ಬಂದು ತಲುಪಿದ್ದರೂ ಸರ್ಕಾರ ಕುಂಭಕರ್ಣನ ರೀತಿ ನಿದ್ರೆ ಮಾಡುತ್ತಿದೆ’ ಎಂದು ವ್ಯಂಗ್ಯ ಮಾಡಿದ್ದಾರೆ.

ಸಾಮಾನ್ಯ ಮಹಿಳೆಯರೊಂದಿಗೆ ರಾಹುಲ್ ಮಾರುಕಟ್ಟೆಗೆ ರೌಂಡ್ಸ್ ಹಾಕಿದ್ದಾರೆ. ಬೇರೆ ಬೇರೆ ತರಕಾರಿಗಳ ಬೆಲೆ ಕೇಳಿದ್ದಾರೆ. ಮಹಿಳೆಯರು ತರಕಾರಿಗೆ ಚೌಕಾಸಿ ಮಾಡಿ ಖರೀದಿಸುವುದನ್ನು ನಿಂತು ನೋಡುತ್ತಾರೆ. ಒಂದು ಅಂಗಡಿ ಬಳಿ ಬಂದು ಬೆಳ್ಳುಳ್ಳಿಗೆ ಎಷ್ಟು ಬೆಲೆ ಎಂದು ಕೇಳಿದ್ದಾರೆ. ಬೆಲೆ ಕೇಳಿ ರಾಹುಲ್ ಪಕ್ಕದಲ್ಲಿದ್ದ ಮಹಿಳೆ ಚಿನ್ನಕ್ಕೆ ಕೂಡಾ ಇಷ್ಟು ರೇಟ್ ಇರಲ್ಲ ಎಂದಿದ್ದಾರೆ.

ಇನ್ನು ಮಹಿಳೆಯರ ಜೊತೆ ತಾವೂ ತರಕಾರಿ ಖರೀದಿಸಿ ಸುತ್ತಾಡಿದ್ದಾರೆ. ಬೆಲೆ ಏರಿಕೆಗೆ ಕಾರಣವೇನೆಂದು ಮಹಿಳೆಯರ ಬಳಿ ಕೇಳಿ ತಿಳಿದುಕೊಂಡಿದ್ದಾರೆ. ಬಳಿಕ ಮಹಿಳೆಯರ ಮನೆಗೆ ಹೋಗಿ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

“लहसुन कभी ₹40 था, आज ₹400!”

बढ़ती महंगाई ने बिगाड़ा आम आदमी की रसोई का बजट - कुंभकरण की नींद सो रही सरकार! pic.twitter.com/U9RX7HEc8A

— Rahul Gandhi (@RahulGandhi) December 24, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ