ಗುರು ಎಲ್ ಕೆ ಅಡ್ವಾಣಿಗೇ ಪ್ರಧಾನಿ ಮೋದಿ ಗೌರವ ಕೊಡಲ್ಲ: ರಾಹುಲ್ ಆರೋಪ
ಅನಾರೋಗ್ಯ ಪೀಡಿತರಾಗಿರುವ ಮಾಜಿ ಪ್ರಧಾನಿ ವಾಜಪೇಯಿ ಭೇಟಿ ಬಳಿಕ ಟ್ವೀಟ್ ಮಾಡಿರುವ ರಾಹುಲ್ ‘ಏಕಲವ್ಯ ತನ್ನ ಗುರುವಿಗಾಗಿ ಹೆಬ್ಬರಳನ್ನೇ ತುಂಡರಿಸಿ ಕೊಟ್ಟನಂತೆ. ಆದರೆ ಬಿಜೆಪಿ ತಮ್ಮ ಗುರುಗಳನ್ನೇ ಮೂಲೆಗುಂಪು ಮಾಡುವ ಪರಿಪಾಠ ಬೆಳೆಸಿಕೊಂಡಿದೆ.
ವಾಜಪೇಯಿ, ಅಡ್ವಾಣಿ, ಜಸ್ವಂತ್ ಸಿಂಗ್ ರಂತಹ ಹಿರಿಯ ನಾಯಕರನ್ನು ಹೀನಾಯವಾಗಿ ನಡೆಸಿಕೊಳ್ಳುವುದೇ ಪ್ರಧಾನಿ ಮೋದಿಯ ಸಂಸ್ಕೃತಿಯಾಗಿದೆ’ ಎಂದು ರಾಹುಲ್ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.