ಒಂದೆಡೆ ಜನರು ಹಣಕ್ಕಾಗಿ ಎಟಿಎಂ, ಬ್ಯಾಂಕ್‌ಗಳ ಮುಂದೆ ಗಂಟೆಗಟ್ಟಲೆ ಸರತಿಸಾಲಲ್ಲಿ ನಿಲ್ಲುತ್ತಾರೆ. ಎಷ್ಟು ಕಟ್ಟಪಟ್ಟರೂ ಕೈಗೆ ಸಿಗುವುದು ಅಷ್ಟೋ ಇಷ್ಟು. ಅಷ್ಟೇ ಅಲ್ಲ ದೇಶದಲ್ಲಿರುವ ಹೆಚ್ಚಿನ ಎಟಿಎಂಗಳ ಮಂದೆ ನೋ ಕ್ಯಾಶ್ ಬೋರ್ಡ್‌ನ್ನೇ ನೇತು ಹಾಕಿರುವುದನ್ನು ಕಾಣುತ್ತೇನೆ. ಆದರೆ ಗುಜರಾತಿನ ನವಸಾರಿಯಲ್ಲಿ ನಡೆದಿರುವ ಒಂದು ಘಟನೆ, ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಉತ್ತರ ಭಾರತದಲ್ಲಿ ಭಜನೆ, ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಣವನ್ನು ಸುರಿಯುವ ಸಂಪ್ರದಾಯವಿದೆ. ಅಂತೆಯೇ ನಿನ್ನೆ ಕೂಡ ಗುಜರಾತಿನ ನವಸಾರಿಯಲ್ಲಿ ಭಾನುವಾರ "ಭಜನ್ ಸಂಧ್ಯಾ" ಕಾರ್ಯಕ್ರಮದಲ್ಲಿ ಗಾಯಕಿಯ ಮೇಲೆ ಹಣವನ್ನು ಸುರಿಯಲಾಗಿದೆ. 10 ರೂಪಾಯಿಯಿಂದ ಹಿಡಿದು 2,000 ರೂಪಾಯಿವರೆಗಿನ ನೋಟುಗಳಿಂದಲೇ ಆಕೆಯನ್ನು ಮುಳುಗಿಸಲಾಗಿದೆ.