ಮಳೆ ಮಳೆ... ಮುಂಬೈನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ, ಎಲ್ಲೆಲ್ಲೂ ನೀರೇ

Sampriya

ಸೋಮವಾರ, 22 ಜುಲೈ 2024 (16:03 IST)
Photo Courtesy X
ಮುಂಬೈ : ಕಳೆದ 24ಗಂಟೆಗಳಿಂದ  ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮುಂಬೈನ ಕೆಲ ಪ್ರದೇಶಗಳು ಜಲಾವೃತವಾಗಿ, ಜನಜೀವನ ಅಸ್ತವ್ಯಸ್ಥವಾಗಿದೆ.

ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಶನ್‌ನ ಸ್ವಯಂಚಾಲಿತ ಹವಾಮಾನ ಕೇಂದ್ರದ ಪ್ರಕಾರ, ಟ್ರಾಂಬೆಯಲ್ಲಿ (241 ಮಿಮೀ) ಗರಿಷ್ಠ ಮಳೆ ದಾಖಲಾಗಿದೆ, ನಂತರ ವಡಾಲಾ (223 ಮಿಮೀ), ಘಾಟ್‌ಕೋಪರ್ (215 ಮಿಮೀ), ವರ್ಲಿ (204 ಮಿಮೀ), ಸೆವ್ರಿ (203 ಮಿಮೀ), ಮತ್ತು ಬಿಕೆಸಿ (199 ಮಿಮೀ) ಮಳೆಯಾಗಿದೆ.

ಇನ್ನೂ ಭಾರೀ ಮಳೆಗೆ  ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ವಿಭಾಗವು ಮುಂಜಾಗೃತ ಕ್ರಮದ ಪ್ರಕಟಣೆಯನ್ನು ಹೊರಡಿಸಿದೆ. ಭಾರೀ ಮಳೆ ಹಿನ್ನೆಲೆ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆಯಿದೆ. ಭಾರೀ ಮಳೆಯ ಸಮಯದಲ್ಲಿ, ನಾಗರಿಕರು ಜಾಗರೂಕರಾಗಿರಬೇಕು ಮತ್ತು ಅಗತ್ಯವಿದ್ದಲ್ಲಿ ಮಾತ್ರ ಹೊರಗೆ ಹೋಗಬೇಕೆಂದು ಹೇಳಿದ್ದಾರೆ.

ಇಂದು ಮುಂಬೈನಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ  ನೀಡಿದೆ. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಹೋಗಿ. ಆದಷ್ಟು ಮನೆಯಲ್ಲೇ ಇರಲು ಪ್ರಯತ್ನಿಸಿ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಬೇಕು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ