ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ರಾಮಲಲ್ಲಾನ ಮೂರ್ತಿಯೇ ಅಲ್ಲ!

Krishnaveni K

ಶನಿವಾರ, 20 ಜನವರಿ 2024 (10:59 IST)
Photo Courtesy: Twitter
ಅಯೋಧ್ಯೆ: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ರಾಮಲಲ್ಲಾನದ್ದೇ ಅಲ್ಲ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಿಂದ ಕಣ್ಣು ತೆರೆದ ಸ್ಥಿತಿಯಲ್ಲಿರುವ ಮಂದಸ್ಮಿತ ರಾಮನ ಮೂರ್ತಿಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ರಾಮಲಲ್ಲಾನ ಮೂರ್ತಿ ಎಂದು ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ.

ಆದರೆ ನಿಜವಾಗಿಯೂ ಇದು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ರಾಮಲಲ್ಲಾನ ಮೂರ್ತಿಯ ಫೋಟೋ ಅಲ್ಲ ಎಂದು ಸತ್ಯೇಂದ್ರ ದಾಸ್ ಸ್ಪಷ್ಟಪಡಿಸಿದ್ದಾರೆ. ಪ್ರಾಣ ಪ್ರತಿಷ್ಠೆಯಾಗುವ ಮುನ್ನ ಬಾಲ ರಾಮನ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ.  ಆದರೆ ನಿಜವಾಗಿಯೂ ಇದು ಅಯೋಧ್ಯೆಯ ಬಾಲರಾಮನ ಫೋಟೋ ಆಗಿದ್ದರೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಮಜನ್ಮಭೂಮಿ ಟ್ರಸ್ಟ್ ರಾಮಲಲ್ಲಾನ ಮುಚ್ಚಿದ ಸ್ಥಿತಿಯಲ್ಲಿರುವ ಮೂರ್ತಿಯ ಫೋಟೋವೊಂದನ್ನು ಹರಿಯಬಿಟ್ಟಿತ್ತು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಮೂರ್ತಿಯ ಅನಾವರಣಗೊಳಿಸುವ ಫೋಟೋವೊಂದು ವೈರಲ್ ಆಗಿತ್ತು. ಜನವರಿ 22 ರಂದೇ ಮೂರ್ತಿಯ ನಿಜರೂಪ ದರ್ಶನ ಸಾರ್ವಜನಿಕರಿಗೆ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ