ಶೀಘ್ರದಲ್ಲಿ ರಾಮ ಮಂದಿರ ನಿರ್ಮಾಣ

ಶನಿವಾರ, 4 ಫೆಬ್ರವರಿ 2017 (15:00 IST)
ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಹೇಳಿದ್ದಾರೆ. 
ರಾಜಧಾನಿ ರಾಯ್ಪುರದಲ್ಲಿ  ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಇದು ಭಗವಾನ ರಾಮ ತಾಯಿ ಕೌಸಲ್ಯಾಳ ತವರಾಗಿದೆ. ಜ್ಯೋತಿಷ್ಯರ ಪ್ರಕಾರ ತನ್ನ ತಾಯಿಯ ತವರಲ್ಲಿ ವಿರಾಜಮಾನನಾದ ದಿನಗಳು ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಪ್ರಸಕ್ತವಾಗಲಿದೆ ಎಂದಿದ್ದಾರೆ.
 
ಮಂದಿರ ನಿರ್ಮಾಣ ಹಾದಿಯಲ್ಲಿ ಎದುರಾಗಿದ್ದ ಎಲ್ಲ ಬಿಕ್ಕಟ್ಟುಗಳನ್ನು ಬದಿಗೊತ್ತಿ ಶೀಘ್ರದಲ್ಲಿ ದೇಗುಲ ನಿರ್ಮಾಣ ಕಾರ್ಯಗಳನ್ನು ಆರಂಭಿಸಲಾಗುವುದು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
 
ದೈವದೂತ ರಾಮನಿಂದ ಪ್ರತೀಯೊಬ್ಬರೂ ಪಾಠ ಕಲಿಯಬೇಕಿದೆ. ದೇಶ ಕಟ್ಟಲು ಜನತೆ ಒಗ್ಗೂಡಿ ಕೆಲಸ ಮಾಡಬೇಕಿದೆ. ಮರ್ಯಾದಾ ಪುರುಷೋತ್ತಮ ರಾಮ ತನ್ನ ಇಡೀ ಜೀವನವನ್ನು ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಗಾಗಿ ಮುಡಿಪಾಗಿಟ್ಟಿದ್ದರು. ಹೀಗಾಗಿ ದೇಶ ಕಟ್ಟಲು ದಲಿತರು, ಬುಡಕಟ್ಟು ಜನರು, ಹಿಂದುಳಿದ ಜನರೆನ್ನದೆ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
 
ತಮ್ಮ ಮಾತುಗಳನ್ನು ಮುಂದುವರೆಸುತ್ತ, ಮರ್ಯಾದಾ ಪುರುಷೋತ್ತಮ ರಾಮನಿಂದ ನಮಗೆ ಸದಾ ಪ್ರೇರಣೆ ಪಡೆಯಬೇಕಿದೆ. ಅವರು ಸಂಪೂರ್ಣ ಸಮಾಜವನ್ನು ಒಗ್ಗೂಡಿಸಿದ್ದರು. ರಾಷ್ಟ್ರ ನಿರ್ಮಾಣಕ್ಕಾಗಿ ನಾವೀಗ ದೇಶದ ದಲಿತ, ಅನುಸೂಚಿತ ಜನಜಾತಿ,ವನವಾಸಿಗಳು ಮತ್ತು ಇತರರನ್ನು ಜತೆಗೆ ಸೇರಿಸಿಕೊಂಡು ನಡೆಯಬೇಕಿದೆ ಎಂದವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ