ಮತ್ತೆ ರಾಮಮಂದಿರ ಅಸ್ತ್ರವನ್ನು ಕೈಗೆತ್ತಿಕೊಂಡ ಬಿಜೆಪಿ

ಬುಧವಾರ, 25 ಜನವರಿ 2017 (12:34 IST)
ಉತ್ತರ ಪ್ರದೇಶ ಚುನಾವಣೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸದಾ
ಮತದಾರರ ಓಲೈಕೆಗೆ ಸದಾ ವಿವಾದಾತ್ಮಕ ರಾಮ ಮಂದಿರ ನಿರ್ಮಾಣ ವಿಚಾರವನ್ನು ಕೈಗೆತ್ತಿಕೊಳ್ಳುವ ಭಾರತೀಯ ಜನತಾ ಪಕ್ಷ ಮತ್ತೆ ಅದೇ ವಿಚಾರವನ್ನು ಗೆಲುವಿನ ಅಸ್ತ್ರವಾಗಿಸಿಕೊಳ್ಳ ಹೊರಟಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ್ ಪಿ ಮೌರ್ಯ, ರಾಮ ಮಂದಿರ ನಂಬಿಕೆಯ ಪ್ರಶ್ನೆಯಾಗಿದೆ. ಎರಡು ತಿಂಗಳಲ್ಲಿ ಮಂದಿರ ನಿರ್ಮಾಣ ಅಸಾಧ್ಯ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗೆದ್ದುಕೊಂಡರೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಳದಲ್ಲೇ ಭವ್ಯ ರಾಮ ಮಂದಿರವನ್ನು ನಿರ್ಮಿಸಲಾಗುವುದು. ಉತ್ತರ ಪ್ರದೇಶ ಚುನಾವಣೆ ಬಳಿಕ ಮಂದಿರ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ. 
 
ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಾಗ ಮೌರ್ಯ ವಿಕಾಸದ ವಿಚಾರವನ್ನು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದ್ದರು. ಆದರೆ ಮತ್ತೀಗ ಹಳೇ ಗಂಡನ ಪಾದವೇ ಗತಿ ಎಂಬಂತೆ ರಾಮ ಮಂದಿರ ವಿಚಾರವನ್ನಿಟ್ಟುಕೊಂಡು ಮತಗಳನ್ನು ಸೆಳೆಯಲು ಹೊರಟಿದ್ದಾರೆ. 
 
19992ರಿಂದ 2000ದವರೆಗೆ ಶ್ರೀರಾಮ ಬಿಜೆಪಿಯ ರಾಜನೀತಿಯ ಕೇಂದ್ರವಾಗಿದ್ದ. ಮತ್ತೀಗ ಮೌರ್ಯ ಅವರ ಈ ಹೇಳಿಕೆಗೆ ಕೇಂದ್ರ ಎಷ್ಟರ ಮಟ್ಟಿಗೆ ಬೆಂಬಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ