ಅಯೋಧ್ಯೆಯಲ್ಲಿ ಮಾತ್ರವಲ್ಲ ಮೆಕ್ಸಿಕೋದಲ್ಲೂ ರಾಮನ ಪ್ರತಿಷ್ಠಾಪನೆ

geetha

ಸೋಮವಾರ, 22 ಜನವರಿ 2024 (17:00 IST)
ಮೆಕ್ಸಿಕೋ : ಇಂದು ರಾಮ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಮೆಕ್ಸಿಕೋದಲ್ಲಿಯೂ ಸಹ ದೇಶದ ಮೊದಲ ರಾಮ ಮಂದಿರ ಉದ್ಘಾಟನೆಗೊಂಡಿದೆ. ಭಾನುವಾರ ಉದ್ಘಾಟನೆಗೊಂಡ ಈ ಮಂದಿರದಲ್ಲಿ ಅಮೆರಿಕ ಮೂಲದ ಪುರೋಹಿತರು ಪ್ರಾಣಪ್ರತಿಷ್ಠಾಪನೆ ನೆರವೇರಿಸಿದರು. ಮೆಕ್ಸಿಕೋದ ಗಣ್ಯರು‌ ಮತ್ತು ಅತಿಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ಭಾರತೀಯರು ಭಜನೆ ಮತ್ತು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕುರಿತು ಭಾರತೀಯ ದೂತಾವಾಸ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಕ್ವೆರ್ಟಾರೋ ನಗರದಲ್ಲಿ ದೇಶದ ಮೊದಲ ರಾಮಮಂದಿರ ಸ್ಥಾಪಿಸಲ್ಪಟ್ಟಿದೆ. ಶೀಘ್ರದಲ್ಲಿಯೇ ಇಲ್ಲಿ ಹನುಮಾನ್‌ ಮಂದಿರವನ್ನೂ ನಿರ್ಮಿಸಲಾಗುವುದು ಎಂದಿದೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ