ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕೋವಿಂದ್`ಗೆ ಭಾರೀ ಮುನ್ನಡೆ
ಗುರುವಾರ, 20 ಜುಲೈ 2017 (14:12 IST)
ದೇಶದ 14ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿದೆ. ಮೊದಲ ಸುತ್ತಿನ ಮತ ೆಣಿಕೆ ಮುಗಿದಾಗ ನಿರೀಕ್ಷೆಯಂತೆ ಎನ್`ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಮುನ್ನಡೆ ಸಾಧಿಸಿದ್ದಾರೆ.
ಬೆಳಗ್ಗೆ 11.130ಕ್ಕೆ ಮತ ಎಣಿಕೆ ಆರಂಭವಾಗಿದ್ದು, 4 ಟೇಬಲ್`ಗಳಲ್ಲಿ 8 ಸುತ್ತಿನ ಮತ ಎಣಿಕೆ ನಡೆಯಲಿದೆ. ಸದ್ಯ, ಅರುಣಾಚಲ ಪ್ರದೇಶ, ಅಸ್ಸಾಂ, ಆಂಧ್ರಪ್ರದೇಶ, ಬಿಹಾರ ರಾಜ್ಯಗಳ ಮತ ಎಣಿಕೆ ಮುಗಿದಿದ್ದು, ಎಲ್ಲ ಕಡೆ ಕೋವಿಂದ್ ಮುನ್ನಡೆ ಸಾಧಿಸಿದ್ದಾರೆ. ಮಧ್ಯಾಹ್ನ 2 ಗಂಟೆ ವೇಳೆಗೆ ರಾಮನಾಥ್ ಕೋವಿಂದ್`ಗೆ 60,683 ಮತಗಳು ಬಿದ್ದಿದ್ದು, ವಿಪಕ್ಷಗಳ ಅಭ್ಯರ್ಥಿ ಮೀರಾಕುಮಾರ್`ಗೆ 22,924 ಮತಗಳು ಬಿದ್ದಿವೆ.
ಸಂಜೆ ವೇಳೆಗೆ ಸಂಪೂರ್ಣ ಚಿತ್ರಣ ಸಿಗುವ ಸಾಧ್ಯತೆ ಇದೆ. 3ನೇ ಸುತ್ತಿನಲ್ಲಿ ಕರ್ನಾಟಕದ ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಜೆಡಿಎಸ್ ಸಹ ಮೀರಾಕುಮಾರ್`ಗೆ ಬೆಂಬಲ ಸೂಚಿಸಿದೆ. ಹೀಗಾಗಿ, ಅಡ್ಡ ಮತದಾನ ಆಗಿದೆಯೇ ಎಂಬ ಕುತೂಹಲಕ್ಕೆ ಸಂಜೆ ತೆರೆ ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ