ಅಮಿತ್ ಶಾ ಫೋಟೋ ಹಾಕು ಅಂದ್ರೆ ನಟನ ಫೋಟೋ ಬ್ಯಾನರ್ ಹಾಕಿ ಬಿಜೆಪಿ ಯಡವಟ್ಟು

Krishnaveni K

ಶುಕ್ರವಾರ, 7 ಮಾರ್ಚ್ 2025 (14:37 IST)
ಚೆನ್ನೈ: ಇಂದು ತಮಿಳುನಾಡಿಗೆ ಭೇಟಿ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸ್ವಾಗತ ಕೋರುವ ಬ್ಯಾನರ್ ಒಂದನ್ನು ಹಾಕುವಾಗ ತಮಿಳುನಾಡಿನ ರಾಣಿಪೇಟ್ ಬಿಜೆಪಿ ಘಟಕ ನಟನ ಫೋಟೋ ಹಾಕಿ ಯಡವಟ್ಟು ಮಾಡಿಕೊಂಡಿದೆ.

ರಾಣಿಪೇಟ್ ಗೆ ಈವತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡಿದ್ದರು. ತಮ್ಮ ನಾಯಕ ಬರುತ್ತಾರೆ ಎಂದರೆ ಯಾವುದೇ ಪಕ್ಷವೂ ಭರ್ಜರಿ ಬ್ಯಾನರ್ ಹಾಕಿ ಸ್ವಾಗತ ಕೋರುವುದು ಸಹಜ. ಅದೇ ರೀತಿ ಸ್ಥಳೀಯ ಬಿಜೆಪಿ ನಾಯಕರೂ ಸಿದ್ಧತೆ ಮಾಡಕೊಂಡಿದ್ದರು.

ಆದರೆ ಅಲ್ಲೇ ಆಗಿದ್ದು ಯಡವಟ್ಟು. ಬ್ಯಾನರ್ ನಲ್ಲಿ ಅಮಿತ್ ಶಾ ಫೋಟೋ ಹಾಕುವ ಬದಲು ಅವರನ್ನೇ ಹೋಲುವ ನಟ ಸಂತಾನಭಾರತಿ ಫೋಟೋ ಹಾಕಿ ಉದ್ದುದ್ದ ಸ್ವಾಗತ ಸಾಲುಗಳನ್ನು ಬರೆದಿದ್ದಾರೆ.

ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಖತ್ ಟ್ರೋಲ್ ಆಗುತ್ತಿದೆ. ರಾಣಿಪೇಟ್ ಗೆ ಬಂದು ಸಿಐಎಸ್ಎಫ್ ಕೋಸ್ಟಲ್ ಸೈಕಲ್ ರಾಲಿ ಉದ್ಘಾಟಿಸಲು ಅಮಿತ್ ಶಾ ಬಂದಿದ್ದರು. ಇದಾದ ಬಳಿಕ ಅವರು ಕರ್ನಾಟಕಕ್ಕೆ ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ