ಮಹಿಳೆ ಜೊತೆ ಕಾಮದಾಟವಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಶಾಸಕ..?
ಶುಕ್ರವಾರ, 21 ಜುಲೈ 2017 (18:39 IST)
ಕೇರಳದ ಕಾಂಗ್ರೆಸ್ ಶಾಸಕ ವಿನ್ಸೆಂಟ್ ವಿರುದ್ಧ 51 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಕೇಸು ದಾಖಲಾಗಿದೆ. ಇತ್ತೀಚೇಗೆ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಪೊಲೀಸರ ಬಳಿ ಕೇರಳ ಶಾಸಕನ ವಿರುದ್ಧ ಆರೋಪ ಮಾಡಿದ್ದಾಳೆ. ಮಹಿಳೆಯ ಹೇಳಿಕೆ ಆಧರಿಸಿ ಪೊಲೀಸರು ಶಾಸಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಕೊವಲಂ ಕ್ಷೇತ್ರದ ಶಾಸಕರಾಗಿರುವ ವಿನ್ಸೆಂಟ್ ಈ ಅತ್ಯಾಚಾರ ಆರೋಪವನ್ನ ತಳ್ಳಿ ಹಾಕಿದ್ದಾರೆ. ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಸಿಪಿಎಂ ಮುಖಂಡರು ಆಕೆಯ ಮನೆಯಲ್ಲಿದ್ದರು ಮತ್ತು ಆಕೆಯ ಸಹೋದರನು ಸಹ ಸಿಪಿಎಂ ಮುಖಂಡನಾಗಿದ್ದು ನನ್ನ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.
ಆದರೆ, ಮಹಿಳೆ ಮಾತ್ರ ಶಾಸಕ ತನ್ನ ಮೇಲೆ ಅತ್ಯಾಚಾರ ನಡೆಸಿದ್ದು ನಿಜ. ಬಳಿಕ ಪದೇ ಪದೇ ಪೋನ್ ಕರೆ ಮಾಡಿ ನನಗೆ ಕಿರುಕುಳ ನೀಡಿದ್ದಾನೆ ಎಂದು ಪೊಲಿಸರು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ