ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ
ಗುರುವಾರ, 27 ಆಗಸ್ಟ್ 2020 (08:47 IST)
ರಾಂಚಿ : ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಆಕೆಯ ಸಹೋದ್ಯೋಗಿ ಅತ್ಯಾಚಾರ ಎಸಗಿದ ಘಟನೆ ಜಮ್ಸೆಡ್ಪುರದ ಸಿಡ್ಗೋರಾ ಕೋವಿಡ್ ಕೇಂದ್ರದಲ್ಲಿ ನಡೆದಿದೆ.
ಕೋವಿಡ್ ಕೇಂದ್ರದಲ್ಲಿ ಭದ್ರತೆಗಾಗಿ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ನಿಯೋಜಿಸಲಾಗಿತ್ತು. ಆ ವೇಳೆ ಕಾನ್ಸ್ಟೇಬಲ್ ಅನಿಲ್ ಕುಮಾರ್ ಎಂಬಾತ ಮಹಿಳಾ ಕಾನ್ಸ್ಟೇಬಲ್ ಬಳಿ ಬಂದು ಕೆಳ ಮಹಡಿಯಲ್ಲಿ ಕೊರೊನಾ ವೈರಸ್ ಹೆಚ್ಚಾಗಿವೆ. ಮೇಲಿನ ಮಹಡಿ ಸುರಕ್ಷಿತವಾಗಿದೆ ಎಂದು ತೋರಿಸಲು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತೆ ಮಂಗಳವಾರ ಪೊಲೀಸರಿಗೆ ಲಿಖಿತ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.