ನೆರೆಮನೆಯನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ! ಮನನೊಂದು ಹುಡುಗಿ ಏನ್ ಮಾಡ್ಕೊಂಡ್ಳು ಗೊತ್ತ?

ಭಾನುವಾರ, 29 ಮೇ 2022 (16:04 IST)
ಲಕ್ನೋ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನೆರೆಮನೆಯ ಹುಡುಗನೊಬ್ಬ ಅತ್ಯಾಚಾವೆಸಗಿ,
 
ಮದುವೆಗೆ ತಿರಸ್ಕರಿಸಿದ್ದಕ್ಕೆ ಬಾಲಕಿಯು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.

17 ವರ್ಷದ ನೆರೆಮನೆಯ ಹುಡುಗ 15 ವರ್ಷದ ಬಾಲಕಿಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿದ್ದ. ಘಟನೆಯ ಬಗ್ಗೆ ತಿಳಿದ ಬಾಲಕಿಯ ಸಂಬಂಧಿಕರು ತಮ್ಮ ಮಗಳನ್ನು ಮದುವೆ ಆಗುವಂತೆ ಹುಡುಗನನ್ನು ಒತ್ತಾಯಿಸಿದ್ದರು. ಆದರೆ ಆತನ ಪೋಷಕರು ಅವನು ಅಪ್ರಾಪ್ತ ಎಂದು ಹೇಳಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

ಇದರಿಂದ ಮನನೊಂದ ಬಾಲಕಿಯು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಸಹೋದರ ಸೈಪ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಆರೋಪಿಯ ಕುಟುಂಬದ ಸದಸ್ಯರು ಪೊಲೀಸ್ ದೂರು ದಾಖಲಿಸದಂತೆ ಒತ್ತಡ ಹೇರಿದ್ದರು. 

ಸಭೆಯಲ್ಲಿ ಇತರ ಸಮುದಾಯದವರು ಅವರಿಬ್ಬರೂ ಪ್ರೌಢಾವಸ್ಥೆಗೆ ಬಂದ ನಂತರ ಮದುವೆಯಾಗಬೇಕೆಂದು ನಾವು ಒತ್ತಾಯಿಸಿದ್ದಾರೆ. ಆದರೂ ಆರೋಪಿಯ ಕುಟುಂಬಸ್ಥರು ಇತ್ಯರ್ಥಕ್ಕೆ ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದ ಬಾಲಕಿಯು ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹುಡುಗನನ್ನು ಬಂಧಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ